ಸುರಪುರ: ಯಾದಗಿರಿ ಜಿಲ್ಲಾ ಪೋಲಿಸ್ ವತಿಯಿಂದ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬರುವ ಶನಿವಾರ (ದಿನಾಂಕ ೦೭-೦೩-೨೦೨೦) ಬೆಳಿಗ್ಗೆ ೬:೩೦ಕ್ಕೆ ನಗರದಲ್ಲಿ ಮಿನಿ ಮ್ಯಾರಾಥಾನ್ ಹಮ್ಮಿಕೊಂಡಿರುವುದಾಗಿ ಯಾದಗಿರಿ ಜಿಲ್ಲಾ ಎಸ್ಪಿ ರುಷಿಕೇಶ ಭಗವಾನ್ ಸೋನೆವಾನೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು,ಶನಿವಾರ ಬೆಳಿಗೆಗ ೬:೩೦ಕ್ಕೆ ಸುರಪುರ ನಗರದ ತಿಮ್ಮಾಪುರ ಬಸ್ ನಿಲ್ದಾಣ ದಿಂದ ಮ್ಯಾರಥಾನ್ ಆರಂಭಗೊಳ್ಳಲಿದ್ದು ಸ್ಥಳಿಯ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಚಾಲನೆ ನೀಡಲಿದ್ದಾರೆ.ತಿಮ್ಮಾಪುರ ಬಸ್ ನಿಲ್ದಾಣದಿಂದ ಮರೆಗೆಮ್ಮ ಗುಡಿ,ಬಡೆ ಮಜೀದ್,ರಂಗಂಪೇಟೆ ಬಜಾರ್,ಅಂಬೇಡ್ಕರ್ ಚೌಕ್,ನಗರಸಭೆ ಕ್ರಾಸ್,ಗಾಂಧಿ ಚೌಕ್,ದರಬಾರ್ ರೋಡ್,ಮೂರ್ತಿ ಕಟ್ಟೆ,ಹನುಮಾನ್ ಟಾಕೀಸ್ ರೋಡ್ ಮಾರ್ಗವಾಗಿ ಸುರಪುರ ಪೋಲಿಸ್ ಠಾಣೆಗೆ ಬಂದು ಮುಕ್ತಾಯವಾಗಲಿದೆ.
ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಹತ್ತು ಜನರಿಗೆ ಬಹುಮಾನ ನೀಡಲಾಗುತ್ತಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಯುವಕರು,ವಿದ್ಯಾರ್ಥಿಗಳು,ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಅವರು ತಿಳಿಸಿದ್ದಾರೆ.