ವೀರಶೈವ ಲಿಂಗಾಯತ ಅಭೀವೃಧ್ಧಿ ನಿಗಮಕ್ಕಾಗಿ ಮುಖ್ಯಮಂತ್ರಿಗೆ ಮನವಿ

0
202

ಸುರಪುರ: ರಾಜ್ಯದಲ್ಲಿಯ ಅಲ್ಪಸಂಖ್ಯಾತ ಸಮುದಾಯವಾಗಿರುವ ವೀರಶೈವ ಲಿಂಗಾಯತ ಸಮುದಾಯವು ನೂರಕ್ಕು ಹೆಚ್ಚು ಒಳಪಂಗಡಗಳನ್ನು ಹೊಂದಿದ್ದು ಎಲ್ಲಾ ಒಳ ಪಂಗಡಗಳಲ್ಲಿ ಕಡು ಬಡತನವನ್ನು ಹೆದರಿಸುತ್ತಿರುವ ಜನರಿದ್ದಾರೆ.ಈ ಎಲ್ಲಾ ಒಳ ಪಂಗಡಗಳ ಜನರ ಅಭಿವೃಧ್ಧಿಗಾಗಿ ಸರಕಾರ ವೀರಶೈವ ಲಿಂಗಾಯತ ಅಭಿವೃಧ್ಧಿ ನಿಗಮ ಸ್ಥಾಪಿಸುವಂತೆ ಮುಖಂಡ ವಿರೇಶ ನಿಷ್ಠಿ ದೇಶಮುಖ ಮಾತನಾಡಿದರು.

ನಗರದ ತಹಸೀಲ್ ಕಚೇರಿ ಮುಂದೆ ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಅಲ್ಪಸಂಖ್ಯಾತತಾಗಿರುವ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿರುವ ಅಲ್ಲಿಯ ಸರಕಾರ ಮರಾಠರ ಅಭೀವೃಧ್ಧಿಗೆ ಒತ್ತು ನೀಡಿದೆ. ಅದರಂತೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಸಮುದಾಯದ ಅಭಿವೃಧ್ಧಿಗಾಗಿ ನಿಗಮ ಸ್ಥಾಪಿಸುವುದು ಅವಶ್ಯವಾಗಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಮುಖಂಡ ಸೋಮಶೇಖರ ಶಾಬಾದಿ ಮಾತನಾಡಿ,ವೀರಶೈವ ಲಿಂಗಾಯತ ಸಮುದಾಯದ ಅನೇಕ ಕುಟುಂಬಗಳ ಯುವಕರಿಗೆ ಉದ್ಯೋಗವಿಲ್ಲ,ಕುಟುಂಬ ನಿರ್ವಹಣೆಗೆ ಆರ್ಥಿಕ ತೊಂದರೆಯಿದೆ,ಬಡ ಕುಟುಂಬದ ಮಕ್ಕಳಿಗೆ ಸರಿಯಾದ ಶಿಕ್ಷಣವು ದೊರೆಯುತ್ತಿಲ್ಲ.ಈ ಎಲ್ಲಾ ಸಮಸ್ಯೆಗಳನ್ನು ಹೆದರಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯದ ಸಮಗ್ರ ಅಭೀವೃಧ್ಧಿಗೆ ಸರಕಾರ ಆದ್ಯತೆ ನೀಡುವ ದೃಷ್ಟಿಯಿಂದ ಅಭೀವೃಧ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಯುವ ವೇದಿಕೆ ತಾಲೂಕು ಅಧ್ಯಕ್ಷ ತಾಲೂಕು ಅಧ್ಯಕ್ಷ ಚಂದ್ರಶೇಖರ ಡೊಣೂರ ಮಾತನಾಡಿ,ಹಿಂದಿನಿಂದಲು ಬಂದ ಎಲ್ಲಾ ಸರಕಾರಗಳು ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿವೆ.ಇದರಿಂದಾಗಿ ದೇಶದಲ್ಲಿಯ ವೀರಶೈವ ಲಿಂಗಾಯತ ಸಮುದಾಯದ ಜನರು ಅಭಿವೃಧ್ಧಿ ದೃಷ್ಠಿಯಿಂದ ವಿವಿಧ ರೀತಿಯಲ್ಲಿ ಹೋರಾಟಗಳನ್ನು ನಡೆಸಲಾಗಿದೆ. ಅದರಂತೆ ರಾಜ್ಯದಲ್ಲಿಯ ಅಲ್ಪಸಂಖ್ಯಾತ ಸಮುದಾಯವಾದ ವೀರಶೈವ ಲಿಂಗಾಯತ ಸಮುದಾಯದ ಅಭೀವೃಧ್ಧಿಗಾಗಿ ಶೀಘ್ರದಲ್ಲಿ ಅಭಿವೃಧ್ಧಿ ನಿಗಮ ರಚಿಸುವಂತೆ ಆಗ್ರಹಸಿ,ನಂತರ ಮುಖ್ಯ ಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಗುಳಗಿ,ಶಂಕರಗೌಡ ಮುನಮುಟಗಿ,ಶಿವರಾಜ ಕಲಜಕೇರಿ,ವಿರೇಶ ಪಂಚಾಂಗಮಠ,ಜಗದೀಶ ಪಾಟೀಲ,ಶರಣಯ್ಯ ಸ್ವಾಮಿ,ಮಲಕಪ್ಪ ಅಕ್ಕಿ,ರಾಘವೇಂದ್ರ ಸಗರ,ಬಸರೆಡ್ಡಿ,ಬಾಗೀಶ ಕಾಳಗಿ,ಸೂಗುರೇಶ ಮಡ್ಡಿ,ಹರೀಶ ಹಳ್ಳದ, ದೀಪಕ್ ಜೀಫ್ರೆ,ದಿನೇಶ ದಾದಾ, ಮಂಜುನಾಥ ಮಠಪತಿ,ಕುಮಾರ ಹೂಗಾರ,ಶಿವು ಹೂಗಾರ,ಆನಂದ ಮಡ್ಡಿ,ಶಿವು ಹೂಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here