ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ

0
41

ಆಳಂದ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಹಸೀಲ್ದಾರ ದಯಾನಂದ ಪಾಟೀಲ ಸಾರ್ವಜನಿಕರಲ್ಲಿ ಮತ್ತೊಮ್ಮೆ ಕೋರಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರ ಪ್ರದ್ರಕ್ಷಣೆ ಹಾಕಿದ ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಅಂತರ ಕಾಪಾಡಲು ಅಂಗಡಿಗಳ ಮುಂದೆ ಚೌಕಾಕಾರದ ಪರೀಧಿ ನಿಗದಿಪಡಿಸಿದ್ದು, ಅಲ್ಲಿಯೇ ನಿಂತು ಜನರು ಶಾಂತ ರೀತಿಯಿಂದ ತಮಗೆ ಬೇಕಾದ ವಸ್ತುಗಳನ್ನು ಪಡೆಯಬೇಕು. ಯಾವುದೇ ಕಾರಣಕ್ಕೂ ಜನಸಂದಣಿಗೆ ಅವಕಾಶ ಕೊಡಬಾರದು ಎಂದರು.

Contact Your\'s Advertisement; 9902492681

ಅಗತ್ಯ ವಸ್ತುಗಳ ಸೇವೆ ಯಥಾಸ್ಥಿತಿಯಲ್ಲಿ ಇರಲಿದೆ. ಲಾಕ್‌ಡೌನ್ ಇದ್ದರು ಅಗತ್ಯ ವಸ್ತುಗಳು ಹಾಗೂ ಸೇವೆಗಳು ಯಥಾಪ್ರಕಾರ ಮುಂದುವರೆಯಲಿದೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗದೇ ತಮಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ವಸ್ತುಗಳನ್ನು ಖರೀದಿಸಬೇಕು. ಅನಗತ್ಯ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಇನ್ನಿತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಕ್ರಮದ ಎಚ್ಚರಿಕೆ: ಸೋಂಕಿನಿಂದ ಪಾರಾಗಲು ಜನರು ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ಮೊರೆ ಹೋಗುತ್ತಿದ್ದು, ಔಷಧಿ ವ್ಯಾಪಾರಿಗಳು ನಿಗದಿತ ಎಂಆರ್‌ಪಿಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರವು ೨ಪಿಎಲ್‌ವಃಐ ಮಾಸ್ಕ್ ಪ್ರತಿಯೊಂದಕ್ಕೆ ೮ರೂ.ಗಳು, ೩ಪಿಎಲ್‌ವೈ ಮಾಸ್ಕ್ ಪ್ರತಿಯೊಂದಕ್ಕೆ ೧೦ರೂ.ಗಳು, ೨೦೦ ಎಂಎಲ್ ಸ್ಯಾನಿಟೈಸರ್ ಪ್ರತಿ ಬಾಟಲಿಗೆ ೧೦೦ರೂ.ಗಳು ಎಂದು ಗರಿಷ್ಠ ಎಂಪಿಆರ್ ದರ ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.

ಕೇಂದ್ರದ ಆದೇಶವನ್ನು ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-೧೯೫೫ ಮತ್ತು ತಿದ್ದುಪಡಿ ಆದೇಶ ೨೦೨೦ ಹಾಗೂ ಪೊಟ್ಟಣ ಸಾಮಗ್ರಿಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಜೀವಮಾಪನ (ಬಯೋಮೆಟ್ರಿಕ್) ಮೂಲಕ ಪಡಿತರ ವಿತರಿಸುವುದರ ಬದಲು ಆಧಾರ್ ಆಧಾರಿತ ಮೊಬೈಲ್ ಓಟಿಪಿ ಮೂಲಕ ಪಡಿತರಿಸಲಾಗುತ್ತಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here