ಚಿಂಚೋಳಿ: ಇಲ್ಲಿನ ತಾಲೂಕಿನ ಕೊಳ್ಳುರ ಗ್ರಾಮದ ಬಳಿ ಚಕ್ ಪೋಸ್ಟ್‌ಗೆ ತಹಸೀಲ್ದಾರ ಅರುಣಕುಮಾರ ಕುಲಕರ್ಣಿ ಅವರು ದಿಢೀರ್ ಭೇಟಿ ನೀಡಿ ಪರಿಶಿಲಿಸಿದರು.
ಕೊರೋನಾ ವೈರಸ್ ದಿಂದ ಜಿಲ್ಲಾದ್ಯಂತ ಮುಂಜಾಗೃತ ಕ್ರಮವಹಿಸಿ ಈಗಾಲೆ ಚಿಂಚೋಳಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಹೋಟೆಲ್, ಅಂಗಡಿ. ವೈನ್ ಶಾಪ್, ಬೀದಿ ವ್ಯಾಪಾರ ಬಂದ್ ಮಾಡಲಾಗಿದ್ದು, ಚಿಂಚೋಳಿ ಗಡಿಭಾಗದ ಆಂದ್ರ-ತೆಲಂಗಾಣಾದಿಂದ ಅಥವಾ ಹೊರ ದೇಶದಿಂದ ಬರುವ ಜನರ ಹಾಗೂ ವಾಹನ ತಪಾಷಣೆ ಮಾಡಲು ತಾಲೂಕಿನ ಕೊಳ್ಳುರ, ಮಿರಿಯಾಣ ಮತ್ತು ಕುಂಚವರಾಮ ಗಡಿ ಭಾಗಗಲ್ಲಿ ಕೊರನಾ ವೈರಸ್ ಹರಡುವ ತಡೆಗಟ್ಟಲು ಚಕ್ ಪೋಸ್ ಸ್ಥಾಪಿಸಲಾಗಿದೆ ಎಂದು ತಹಸೀಲ್ದಾರ ಅರುಣಕುಮಾರ ಕುಲಕರ್ಣಿ ತಿಳಿಸಿದರು.