ಕಲಬುರಗಿ: ಕೊರೋನಾ ಭೀತಿ ಮತ್ತು ಲಾಕ್ ಡೌನ್ ದಿಂದ ಬಡ ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಇಂತಹವರನ್ನು ಸ್ವಯಂ ಪ್ರೇರಿತ ಕೈಲಾದಷ್ಟು ಸಹಾಯ ಮಾಡುತ್ತಿದ್ದು, ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ನಿಷೇಧ ಹೆರುವುದುನ್ನು ವಾಪಸ್ ಪಡೆಯಬೇಕೆಂದು ಎಸ್.ಡಿ.ಪಿ.ಐ ಮತ್ತು ಎಸ್.ಡಿ.ಟಿ.ಯು ಸಂಘಟನೆಯ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಬಡವರಿಗೆ ಸಮರ್ಪಕ ಪಡಿತರ ವಿತರಣೆ ಮಾಡಬೇಕಂದು ಒತ್ತಾಯಿಸಿ, ಈ ವಿಪತ್ತು ಪರಿಸ್ಥಿತಿಯಲ್ಲಿ ದಾನಿಗಳು ಸಂಘ, ಸಂಸ್ಥೆಗಳು ಬಡವರ ನೇರವಿಗೆ ಧಾವಿಸುತ್ತಿರುವ ಸಂತೋಷದ ವಿಷಯ, ದಾನಿಗಳು ಬಡವರಿಗೆ ನೇರ ಮನೆಗೆ ತರಳಿ ಅವರ ಜೀವನಪ್ಪಯೋಗಿ ದವಸ ಧಾನ್ಯಗಳು ಅವರ ಸಂಕಷ್ಟಕ್ಕೆ ನೇರವಾಗುತ್ತಿದ್ದಾರೆ. ಇದರಿಂದ ಕಡು ಬಡವರ ಹೊಟ್ಟೆಗೆ ಒಂದು ಚೂರು ಆಹಾರ ಬಿಳುತ್ತಿದೆ. ಈ ಕಾರ್ಯವನ್ನು ನಿಷೇಧಿಸುವುದು ಸೂಕ್ತವಲ್ಲ, ತಮ್ಮ ಆದೇಶವನ್ನು ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಬೇಕೆಂದು ಎಸ್.ಡಿ.ಟಿಯು ರಾಜ್ಯಧ್ಯಕ್ಷ ಅಬ್ದುಲ್ ರಹೀಮ್ ಒತ್ತಾಯಿಸಿದರು.
ಕರ್ಫ್ಯೂ ನಿಯಮ ಪಾಲಿಸಿ, ಸಾಮಾಜಿಕ ಆತಂರ ಕಾಯ್ದುಕೊಂಡು ಜಿಲ್ಲಾಡಳಿತ ನಿರ್ದೇಶದಂತೆ ಕೆಲಸ ಮಾಡುವುದು ಸೂಕ್ತ ಪ್ರತಿಯೊಬ್ಬರು ಇನಿಟ್ಟಿನಲ್ಲಿ ಕಾರ್ಯನಿರ್ವಸಬೇಕೆಂದು ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಅಧ್ಯಕ್ಷರಾದ ದಸ್ತೇಗಿರ್ ತಿಳಿಸಿದ್ದರು.