ಲಾಕ್ ಡೌನ್: ರೈತರು, ನಿರ್ಗತಿಕರ ಸಮಸ್ಯೆ ನಿವಾರಣೆಗೆ ದಸ್ತಿ ಅಗ್ರಹ.

0
46

ಕಲಬುರಗಿ: ಕೊರೋನಾ ವೈರಸ್ ತಡೆಗೆ ಸರ್ಕಾರ ಕೈಗೊಂಡ ಅನಿವಾರ್ಯ ಕ್ರಮವಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಮತ್ತು ನಿರ್ಗತಿಕರು ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಸಮರೋಪಾದಿಯ ಕ್ರಮಗಳು ಕೈಗೊಳ್ಳುಬೇಕೆಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ.

ರೈತರು ಬೆಳೆದಿರುವ ಆಯಾ ಹಣ್ಣು ಹಂಪಲಗಳು ಕಟಾವಿಗೆ ಬಂದು ಹಾಳಾಗುತ್ತಿವೆ. ಸರ್ಕಾರ ರೈತರು ಸತ್ತ ಮೇಲೆ ಪರಿಹಾರ ನೀಡಿದರೆ ಜವಾಬ್ದಾರಿಯಿಂದ ನುಣಚಿಕೊಂಡಂತೆ ಆಗುವುದಿಲ್ಲ, ಮುಖ್ಯಮಂತ್ರಿಗಳು ಈಗಾಗಲೇ ಅಧಿಕೃತವಾಗಿ ಪ್ರಕಟಿಸಿರುವಂತೆ ರೈತರು ಬೆಳೆದಿರುವ ಆಯಾ ಹಣ್ಣು ಹಂಪಲಗಳನ್ನು ರೈತರು ಬೆಳೆದಿರುವ ಸ್ಥಳದಲ್ಲಿಯೆ ಸರ್ಕಾರದ ವತಿಯಿಂದ ಖರೀದಿಸಲು ತಕ್ಷಣ ಕ್ರಮಕೈಗೊಳ್ಳಬೇಕು. ಅದರಂತೆ ನಿರ್ಗತಿಕರಿಗೆ ಬೂತ್ ಮಟ್ಟದಲ್ಲಿ ಗುರುತಿಸಿ ಅಂತಹವರಿಗೆ ಊಟ ಇತ್ಯಾದಿಗಳ ವ್ಯವಸ್ಥೆಗೆ ವಿಶೇಷ ದಳ ರಚಿಸಿ ಆ ಮುಖಾಂತರ ಆದ್ಯತೆ ನೀಡಲು ಸರಕಾರಕ್ಕೆ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here