ಲಾಕ್‌ಡೌನ್ ವಿಸ್ತರಣೆ ಸುಳಿವು ನೀಡಡಿದ ಸಂಸದ ಖೂಬಾ

0
75

ಆಳಂದ: ದೆಹಲಿಯಲ್ಲಿ ಈಚೆಗೆ ನಡೆದ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದವರ ಹುಡಕಿ ಅವರ ಮೇಲೆ ಹೆಚ್ಚಿನ ನಿವಾಹಿಸಬೇಕು. ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ವಹಿಸಕೂಡದು, ಇಂಥವರಿಂದಲೇ ಈ ಕೊರೊನಾ ವೈರಸ್ ವೃದ್ಧಿಗೆ ಕಾರಣವಾಗಿ ಏ. ೧೪ರ ವರೆಗಿನ ಲಾಕ್‌ಡೌನ್ ಮುಂದೊಡುವಂತಾಹ ಪರಿಸ್ಥಿತಿ ಎದುರಾಗಿದೆ ಎಂದು ಸಂಸದ ಭಗವಂಥ ಖೂಬಾ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಕೊರೊನಾ ಮುಂಜಾಗೃತೆ ಹಾಗೂ ಕುಡಿಯುವ ನೀರಿನ ಇತ್ಯರ್ಥಕ್ಕೆ ಕರೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮನೆ, ಬಡಾವಣೆಗಳಿಗೆ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆರ ಮೂಲಕ ಹೊರಗಿನಿಂದ ಬಂದವರ ಮಾಹಿತಿ ಆಲಿಸಬೇಕು ಎಂದು ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ ಅವರಿಗೆ ಸೂಚಿಸಿದರು.

Contact Your\'s Advertisement; 9902492681

ಲಾಕ್‌ಡೌನ್ ನುಡುವೆ ಕೃಷಿ ಉತ್ಪಾನಗಳ ಮಾರಾಟ, ಸಾಗಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ಸಂಬಂಧ ಪೊಲೀಸರು ರೈತರಿಗೆ ಹಿಂದಿನ ಭಯವನ್ನು ಹೊಗಲಾಡಿಸಿ ತರಕಾರಿ ವಾಹನ ಸಂಚಾರ, ಮಾರಾಟ ಸಾಗಾಟಕ್ಕೆ ಅನುಕೂಲತೆಯನ್ನು ತಿಳಿಪಡಿಸಬೇಕು. ಅಗತ್ಯ ವಸ್ತುಗಳ ವ್ಯವಹಾರಕ್ಕೆ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು ಎಂದು ಹಾಜರಿದ್ದ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಸಿಪಿಐ ಶಿವಾನಂದ ಗಾಣಿಗೆರ ಅವರಿಗೆ ತಿಳಿಸಿದರು.

ರೈತ ಉತ್ಪನಗಳಿಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ರೈತರಿಗೆ ಮಾರುಕಟ್ಟೆ ಮಾಹಿತಿ ನೀಡಬೇಕು ಎಂದರು.
ರೇಷನ್ ಕಾರ್ಡ್ ಇದ್ದವರಿಗೆ ಹಾಗೂ ಇಲ್ಲದವರಿಗೂ ಸೇರಿ ರೇಷನ್ ಒಮ್ಮೆಲೆ ಎರಡು ತಿಂಗಳ ರೇಷನ್ ಹಂಚಿಕೆ ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚಿಸಿ ಗರಿಭಿ ಕಲ್ಯಾಣ ಯೋಜನೆ ಮೂಲಕ ಪ್ರಧಾನ ಮಂತ್ರಿಗಳು ಜನಹಿತವನ್ನು ಕಾಯಲು ಮುಂದಾಗಿದ್ದಾರೆ ಎಂದರು.

ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇರುವ ಕಾಮಗಾರಿ ತರಿಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದರು ಗ್ರಾಮೀಣ ನೀರು ಸರಬರಾಜ ಅಧಿಕಾರಿ ಚಂದ್ರಮೌಳಿ ಅವರಿಗೆ ಸೂಚಿಸಿರು. ಜೆಇ ಸಂಗಮೇಶ ಬಿರಾದಾರ, ಜಿಪಂ ಎಇಇ ಮಲ್ಲಿಕಾರ್ಜುನ ಕಾರಬಾರಿ ಮಾಹಿತಿ ನೀಡಿದರು.

ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ ಅವರು ಲಾಕ್‌ಡೌನ್ ನಿರಾಶ್ರೀತರಿಗೆ ಸರ್ಕಾರ ಪೂರೈಸಿದ ಊಟ ವಿತರಣೆ ಹಾಗೂ ಕೊಳಚೆ ಪ್ರದೇಶಗಳಿಗೆ ೫೫೦ ಲೀಟರ್ ನಿತ್ಯ ಹಾಲು, ಹಾಗೂ ಪಟ್ಟಣದಲ್ಲಿ ಅಕ್ರಮ ತೆರವು ಹಾಗೂ ಸ್ವಚ್ಛತೆ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡದಾಗ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಏಕೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಪ್ರಶ್ನಿಸಿದರು.

ಪೊಲೀಸರು ಲಾಕ್‌ಡೌನ್ ಸರಿಯಾಗಿ ಪಾಲನೆ ಮಾಡಬೇಕು. ಅನ್ಯ ರಾಜ್ಯಗಳಿಂದ ಒಳ ನುಸುಳಿ ಬಂದವರ ಲೆಕ್ಕವಿಟ್ಟು ಅವರ ಮೇಲೆ ತಪಾಸಣೆ ನಿಗಾವಹಿಲು ಸಂಬಂಧಿತ ಎಲ್ಲ ಅಧಿಕಾರಿಗಳು ಬಿಗುವಿನ ನಿಲುವು ಹೊಂದಬೇಕು ಎಂದರು. ದಿನಸಿ- ತರಕಾರ ಹೊರತು ಪಡಿಸಿ ಇನ್ನೂಳಿದ ಎಲ್ಲ ಓಡಾಟಕ್ಕೆ ನಿರ್ಬಂದ ಹೇರಬೇಕು ಎಂದರು.

ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ, ತಹಸೀಲ್ದಾರ ದಯಾನಂದ ಪಾಟೀಲ. ಗ್ರೇಡ್- ತಹಸೀಲ್ದಾರ ಬಿ.ಜಿ. ಕುದರಿ, ತಾಪಂ ಇಒ ಡಾ| ಸಂಜಯ ರೆಡ್ಡಿ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here