ಕೊರೊನಾ ಹರಡದಂತೆ ಮುಂಜಾಗೃತೆ ವಹಿಸಲು ಸಂಸದ ಖೂಬಾ ಮನವಿ

0
30

ಆಳಂದ: ಮಹಾಮಾರಿ ಕೊರೊನಾ ಹರಡದಂತೆ ನೋಡಿಕೊಳ್ಳಲು ಲಾಕ್‌ಡೌನ್‌ಗೆ ಸರ್ಕಾರದೊಂದಿಗೆ ನಾಗರಿಕರು ಸಹ ಕೈಜೊಡಿಸುವುದು ಅಗತ್ಯವಾಗಿದೆ ಎಂದು ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ಜನತೆಗೆ ಮನವಿ ಮಾಡಿದ್ದರು.

ಪಟ್ಟಣದ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಬಳಿಕ ಅವರು ತಾಲೂಕು ತಸೀಲ್ದಾರರಿಂದ ಲಾಕ್‌ಡೌನ್ ಸಾಧಕ ಬಾಧಕ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿ ಮಾತನಾಡಿದ ಅವರು, ಈ ಮಹಾಮಾರಿ ವೈರಸ್ ಹರಡದಂತೆ ಜನಹಿತಕ್ಕಾಗಿ ಇಡೀ ದೇಶವೇ ಸಂಪೂರ್ಣವಾಗಿ ಲಾಕ್‌ಡೌನ್ ಆಗಿದ್ದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದರು.

Contact Your\'s Advertisement; 9902492681

ಕ್ಷೇತ್ರದಲ್ಲಿ ಈ ಕಾರ್ಯಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಸೇರಿ ತಾಲೂಕಿನ ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನಿರ್ಗತಿಕರಿಗೆ ಆಹಾರ ಒದಗಿಸುವುದಾಗಲಿ ಬಡವರಿಗೆ ದವಸ ಧಾನ್ಯಗಳು ಹೀಗೆ ವ್ಯಾಪಾರಿಗಳು ಸಹ ಕಿರಾಣಿ ಅಂಗಡಿಗಳನ್ನು ತೆರೆದು ದವಸ ಧಾನ್ಯಗಳನ್ನು ಒದಗುಸತ್ತಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಈ ಕೊರೊನಾ ಹರಡಂತೆ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ಜೊತೆಯಲಿದೆ. ಜನರ ಜೀವ ಉಳಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪಣತೊಟಿದೆ. ಯಾರು ಸಹ ದೃತಿಗೆಡಬಾರದು ಎಂದರು.

ಲಾಕ್‌ಡೌನ್ ಬರಿ ಜನತೆಗಷ್ಟೇ ಅಲ್ಲ ಪೊಲೀಸರು ಸಂಕಷ್ಟದಲಿದ್ದು, ತಾಳ್ಮೆಯಿಂದರಬೇಕು. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗರಿಬ ಕಲ್ಯಾಣ ಯೋಜನೆಯನ್ನು ರೂಪಿಸಿ ದೇಶದ ೮೦ ಕೋಟಿ ಜನರಿಗೆ ೧ ಲಕ್ಷ ೭೫ ಸಾವಿರ ಕೋಟಿ ಹಣದ ವ್ಯವಸ್ಥೆ ಮಾಡುತ್ತಿದ್ದಾರೆ. ಜನಧನ ಖಾತೆಗೆ ೫೦೦ ರೂ. ಬಂದಿವೆ. ಕಿಸಾನ ಸಮ್ಮಾನ ಯೋಜನೆ ಖಾತೆಗಳಿಗೆ ಹಣ ಜಮಾ ಕೈಗೊಳ್ಳಲಾಗುತ್ತಿದೆ. ಬಡವರಿಗೆ ಎರಡು ತಿಂಗಳ ರೇಷನ್ ಏಕಕಾಲಕ್ಕೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಡೆ ಇದರಿಂದ ಜನದಟ್ಟಣೆ ಆಗುತ್ತಿದೆ. ದಟ್ಟಣೆ ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು.

ತಹಸೀಲ್ದಾರ ದಯಾನಂದ ಪಾಟೀಲ ಅವರು ಮಾತನಾಡಿ, ಕೊರೊನಾ ವೈರಸ್ ಹರಡಂತೆ ಮುಂಜಾಗೃತ ಕ್ರಮವಾಗಿ ಅಧಿಕಾರಿಗಳ ತಂಡ ರಚಿಸಿ ಎಲ್ಲಡೆ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ಭಾಗದಲ್ಲಿ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಹೊರಗಿನಿಂದ ಬಂದವರಿಗೆ ತಪಸಣೆ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳ ಸಭೆ ಕರೆದ ಸೂಚಿಸಲಾಗಿದೆ. ಬಡವರಿಗೆ ನಿರ್ಗತಿಕರಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಅವರಿದ್ದಲಿಗೆ ಕೊಡಲಾಗುತ್ತಿದೆ. ಪುರಸಭೆ ಮೂಲಕ ಕೊಳಚೆ ಪ್ರದೇಶಗಳಿಗೆ ನಿತ್ಯ ಹಾಲು ವಿತರಿಸಲಾಗತ್ತಿದೆ. ತರಕಾರಿ ವ್ಯಾಪಾರ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದರು.
ಶಾಸಕ ಸುಭಾಷ ಗುತ್ತೇದಾರ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಇನ್ನಿತರರು ಉಪಸ್ಥತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here