ಸುರಪುರ : ಜನನಿ ಕಾಲೇಜು ವಿದ್ಯಾರ್ಥಿನಿಯರಿಂದ ಕೋರೋನಾ ಕುರಿತು ಜಾಗೃತಿ ಜಾಥಾ

0
92

ಸುರಪುರ: ನಗರದ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಗರದ ಕಬಾಡಗೇರಾ ಹಾಗೂ ವಿವಿಧ ವಾರ್ಡುಗಳಲ್ಲಿ ಸಾರ್ವಜನಿಕರಿಗೆ ಕೊರೋನಾ ವೈರಸ್ ರೋಗದ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ಹಾಗೂ ಮಾಸ್ಕಗಳ ವಿತರಣೆ ಕೈಗೊಳ್ಳಲಾಯಿತು.

ಉಪನ್ಯಾಸಕ ಹಾಗೂ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಮಲ್ಲಿಕಾರ್ಜುನ ಕಮತಗಿ ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ದೇಶ ಸೇರಿದಂತೆ ಇಡೀ ಪ್ರಪಂಚ ಹಾಗೂ ನಮ್ಮ ರಾಜ್ಯವನ್ನು ಕಾಡುತ್ತಿರುವ ಕರೋನಾ ವೈರಸ್ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಸೋಂಕು ಹರಡದಂತೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು, ಜನರು ಮನೆಗಳಿಂದ ಹೊರಗಡೆ ಬಾರದೇ ಮನೆಯಲ್ಲಿ ಉಳಿದುಕೊಳ್ಳುವುದು ಈ ರೋಗಕ್ಕೆ ಇರುವ ಏಕೈಕ ಮದ್ದು ಎಂದು ಅವರು ಹೇಳಿದರು.

Contact Your\'s Advertisement; 9902492681

ಇದರಿಂದ ತಮ್ಮ ಹಾಗೂ ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಬೇಕು ಆ ಮೂಲಕ ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು, ಪದೇ ಪದೇ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು, ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕಿ ಶ್ರೀದೇವಿ ನಾಯಕ, ಕಾಲೇಜಿನ ವಿದ್ಯಾರ್ಥಿನಿಯರಾದ ಕರಿಷ್ಮಾ ಶರ್ಮುದ್ದಿನ್, ಶ್ರೀದೇವಿ ಮಾನಪ್ಪ, ಜ್ಯೋತಿ ರಾಜಶೇಖರ, ಶ್ರೀದೇವಿ ಸಿಂಗ್, ನಸ್ರೀನ್, ರೇಣುಕಾ ಈಶ್ವರಪ್ಪ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here