ರಂಜಾನ್ ವಿಶೇಷ: ಉಪವಾಸ ತೊರೆಯುವಾಗ ‘ಖರ್ಜೂರ’ ಬಳಸುವ ಹಿಂದಿನ ಸೀಕ್ರೆಟ್ ಗೊತ್ತೇ..?

0
492

ಉಪವಾಸ ತೊರೆಯುವಾಗ ಖರ್ಜೂರ ಬಳಸಿಕೊಳ್ಳೋದು ಉತ್ತಮ ಅಂತ ಪ್ರವಾದಿ ಮುಹಮ್ಮದ್ (ﷺ) ರವರು ಶಿಫಾರಸ್ಸು ಮಾಡಿದ್ದಾರೆ. ಪೈಗಂಬರರ ಜೀವಿತಾವಧಿಯಲ್ಲೂ ಖರ್ಜೂರದಿಂದಲೇ ಅವರು ಉಪವಾಸ ತೊರೆದಿದ್ದಾರೆ ಅಂತ ಹದೀಸ್ ಗಳು ಹೇಳುತ್ತವೆ. ಹೀಗೆ ಉಪವಾಸವನ್ನ ಖರ್ಜೂರ ಸೇವಿಸಿ ತೊರೆಯೋದೊಂದು ಇಸ್ಲಾಮಿನ ಧಾರ್ಮಿಕ ನಂಬಿಕೆಯಾದ್ರು, ಇದ್ರ ನೆರಳಲ್ಲಿ ಹಲವು ವೈಜ್ಞಾನಿಕ ಉಪಯುಕ್ತತೆಗಳು ನಮಗೆ ಸಿಗುತ್ತವೆ. ಈಗಿನ ವಿಜ್ಞಾನಿಗಳು ಕೂಡ ಇದನ್ನೇ ಸಾರುತ್ತಾರೆ. ಖರ್ಜೂರದಲ್ಲಿ ಫೈಬರ್, ಪೊಟ್ಯಾಶಿಯಂ ಹಾಗೂ ಇನ್ನಿತರ ಪೌಷ್ಟಿಕ ಗುಣಗಳು ಇರೋದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಈ ಬಗ್ಗೆ ಯಾವುದೇ ನಿಮ್ಮ ಪರಿಚಿತ ವೈದ್ಯರ ಬಳಿ ಕೇಳಿ ಮಾಹಿತಿ ಪಡೆದುಕೊಳ್ಳಬಹುದು.

ರಂಜಾನ್ ತಿಂಗಳಿನಲ್ಲಿ ಖರ್ಜೂರ ಅತಿ ಹೆಚ್ಚು ಬೇಡಿಕೆ ಇರುವ ಆಹಾರ. ಇದನ್ನ ಕೇವಲ ಆರ್ಥಿಕ ನೆಲೆಗಟ್ಟಿನಲ್ಲಿ ಅಥವಾ ಉಪವಾಸ ತೊರೆಯಲು ಬೇಕಾದ ಒಂದು ಆಹಾರ ಅನ್ನೋದ್ರ ಆಚೆಗೆ, ಖರ್ಜೂರದ ಉಪಯುಕ್ತತೆಗಳನ್ನ ‘ಈ ಮೀಡಿಯಾ ಲೈನ್’ ತಮ್ಮ ಓದುಗರಿಗಾಗಿ ನೀಡುತ್ತಿವೆ.

Contact Your\'s Advertisement; 9902492681

 ‘ಖರ್ಜೂರ’ದ ಬಗ್ಗೆ ಮುಹಮ್ಮದ್ ಪೈಗಂಬರ್ ಮಾತು:

ಪ್ರವಾದಿ ಮುಹಮ್ಮದ್ (ﷺ) ರವರು ತಾಜಾ ಅಥವಾ ಶುಷ್ಕ ಖರ್ಜೂರದೊಂದಿಗೆ ಉಪವಾಸವನ್ನು ತೊರೆಯಲು ಶಿಫಾರಸು ಮಾಡಿದ್ದಾರೆ. ಫೈಬರ್, ಪೊಟ್ಯಾಸಿಯಮ್ ಮತ್ತು ಇತರ ಪೌಷ್ಟಿಕ ದ್ರವ್ಯಗಳಲ್ಲಿ ಸಮೃದ್ಧವಾಗಿದೆ ಎಂದು ಸಾಬೀತಾಗಿದೆ ಆದರೆ ಅಂದೆ ನಮ್ಮ ಪ್ರವಾದಿಯವರು ಖರ್ಜೂರದ ಬಗ್ಗೆ ಹೇಳಿದ್ದರು ಹಾಗಾಗಿಯೆ ಖರ್ಜೂರ ಸೇವನೆಯನ್ನು ಇಸ್ಲಾಮಿನಲ್ಲಿ ಸುನ್ನತ್ ಎಂದು ಪರಿಗಣಿಸಲಾಗಿದೆ.

ಈ  ಖರ್ಜೂರ ಹಣ್ಣಿನಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಅಪಾರ.

 ರಂಜಾನ್ ತಿಂಗಳಲ್ಲಿ ‘ಖರ್ಜೂರ’ ಸೇವನೆಯಿಂದಾಗುವ ಪ್ರಯೋಜನಗಳು :

*ಖರ್ಜೂರ ಜೀರ್ಣಿಸಿಕೊಳ್ಳಲು ಸುಲಭವಾಗಿದ್ದು, ಉಪವಾಸದ ನಂತರ ನಿಮ್ಮ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ.

*ಹಸಿವನ್ನು ತಗ್ಗಿಸಲು ಖರ್ಜೂರ ಸಹಕಾರಿಯಾಗಿದೆ. ಮತ್ತು ಜೀರ್ಣಕ್ರಿಯೆಯಲ್ಲಾಗುವ ಅಸ್ವಸ್ಥತೆಗಳನ್ನು ತಡೆಯುತ್ತದೆ.

*ಖರ್ಜೂರವು ನಿಮ್ಮ ದೇಹದಲ್ಲಿ ಜೀರ್ಣಕಾರಿ ಸ್ರಾವ (ಡೈಜೆಸ್ಟಿವ್ ಜ್ಯೂಸ್) ಬಿಡುಗಡೆ ಮಾಡಿ ಇಡೀ ದಿನ ನಿಶ್ಕ್ರಿಯಗೊಂಡಿದ್ದ ಹೊಟ್ಟೆಯ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

*ಖರ್ಜೂರವು ‘ನೈಸರ್ಗಿಕ’ ಸಿಹಿಯಾಗಿದ್ದು ದೇಹಕ್ಕೆ ಶಕ್ತಿ ನೀಡುವ ಮೂಲಕ ಮೆದುಳಿನ ಜೀವಕೋಶಗಳು ಮತ್ತು ನರಗಳಿಗೆ ಉತ್ತಮ ಪೋಷಕಾಂಶವಾಗಿದೆ.

*ಉಪವಾಸ ದಿನಗಳಲ್ಲಿ ಆಹಾರ ಸೇವನೆಯ ಸಮಯದಲ್ಲಾಗುವ ಬದಲಾವಣೆ ಮತ್ತು‌ ಕಡಿಮೆ ಫೈಬರ್ ಇರುವ ಆಹಾರ ಸೇವನೆಯಿಂದಾಗುವ ಉಂಟಾಗುವ ಮಲಬದ್ಧತೆಯನ್ನು ತಡೆಯಲು ಖರ್ಜೂರ ಸಹಕಾರಿಯಾಗಿದೆ.

*ರಂಜಾನ್ ತಿಂಗಳಿನಲ್ಲಿ ಹೆಚ್ಚಾಗಿ ಸೇವಿಸುವ ಮಾಂಸ ಮತ್ತು ಕಾರ್ಬೋ ಹೈಡ್ರೇಟ್ಗಳಿಂದ ರಕ್ತದಲ್ಲಿ ಅಸಿಡಿಟಿ ಹೆಚ್ಚಾಗುತ್ತದೆ. ಇದು ಮಧುಮೇಹ(ಡಯಾಬಿಟೀಸ್) ಮೂತ್ರಪಿಂಡದಲ್ಲಿ ಕಲ್ಲುಗಳು, ಮೂತ್ರಕೋಶದ ಸಮಸ್ಯೆ, ಉರಿಯೂತಗಳು, ಅಧಿಕ ರಕ್ತದೊತ್ತಡ ಮತ್ತು ಹೆಮೊರೊಯಿಡ್ಗಳಂತಹ ಆನುವಂಶಿಕ ಕಾಯಿಲೆಗಳಿಗೆ ಕಾರಣವಾಗಬಹುದು ಇದನ್ನು ತಡೆಯಲು ಕ್ಷಾರೀಯ ಲವಣಗಳು(Alkaline salts) ಸಹಕಾರಿಯಾಗುತ್ತವೆ.

ರಂಜಾನ್ ಹೊರತಾಗಿಯೂ ‘ಖರ್ಜೂರ’ ಸೇವನೆಯಿಂದಾಗುವ ಪ್ರಯೋಜನಗಳು:

ಖರ್ಜೂರದಲ್ಲಿ ಹೆಚ್ಚಿನ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವ ಕಾರಣದಿಂದಾಗಿ, ಉಸಿರಾಟದ ತೊಂದರೆಗ, ಹೃದ್ರೋಗ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಖರ್ಜೂರ ಸೇವನೆ ಉಪಯುಕ್ತವಾಗಿದೆ.

ರಕ್ತಹೀನತೆ, ಅಲರ್ಜಿಗಳು ಮತ್ತು ಮಲಬದ್ಧತೆಯನ್ನು ತಡೆಯಲು ಸಹ ಇದು ಸಹಕಾರಿಯಾಗಿದೆ. ಖರ್ಜೂರವನ್ನು ಪ್ರತಿದಿನ ಸೇವಿಸೋದ್ರಿಂದಲೇ ಅರಬ್ ದೇಶಗಳಲ್ಲಿ ಹೆಚ್ಚು ಹೃದ್ರೋಗ ಸಮಸ್ಯೆಗಳು ಕಂಡುಬರುವುದಿಲ್ಲ ಅನ್ನೋದು ವೈದ್ಯಕೀಯ ವಲಯದ ಅಭಿಪ್ರಾಯ. ಖರ್ಜೂರ 7 ವಿಟಮಿನ್ಗಳು ಮತ್ತು 11 ಖನಿಜಗಳು ಒಳಗೊಂಡಿರುತ್ತವೆ. ಗರ್ಭಿಣಿ ಮಹಿಳೆಯರು ಖರ್ಜೂರ ಸೇವನೆ ಗರ್ಭಿಣಿಯರ ಸ್ನಾಯುಗಳನ್ನು ಬಲಪಡಿಸಲು ಪ್ರಚೋಧಿಸುತ್ತವೆ.

ಖರ್ಜೂರದಲ್ಲಿ ಶೇಖಡಾ ೮೦ರಷ್ಟು ಸಕ್ಕರೆಯಾಂಶವಿರುವುದರಿಂದ ಬಾಣಂತಿ ಹೆಂಗಸರಿಗೆ ಅಧಿಕಶಕ್ತಿಯನ್ನು ನೀಡಲು ಸಹಕಾರಿಯಾಗಿದೆ.

ಇವೆಲ್ಲಾ ಕಾರಣದಿಂದಾಗಿ ಇಸ್ಲಾಮಿನಲ್ಲಿ ಖರ್ಜೂರಕ್ಕೆ ಅಧಿಕ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹದೀಸಿನಲ್ಲಿಯೂ ಖರ್ಜೂರದ ಬಗ್ಗೆ ವಿಶೇಷ ಉಲ್ಲೇಖವಿದೆ. ಇದೇ ಕಾರಣಕ್ಕೆ ವರ್ಷವಿಡೀ ಅಲ್ಲದಿದ್ದರು ರಂಜಾನ್ ತಿಂಗಳಿನಲ್ಲಿ ವಿಶೇಷವಾಗಿ ಖರ್ಜೂರವನ್ನು ಸೇವಿಸುವ ಒಂದು ಪದ್ಧತಿಯನ್ನ ಇಸ್ಲಾಂ ರೂಢಿಸಿಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ಧರ್ಮ ರಹಿತವಾಗಿ ಎಲ್ಲರೂ ಖರ್ಜೂರವನ್ನು ಸೇವಿಸೋದು ಉತ್ತಮ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here