ಭಯದ ವಾತಾವರಣ ಸೃಷ್ಠಿಸುತ್ತಿರುವ ಕೋರೊನಾ ವಿರುದ್ಧ ಜಾಗೃತಿ ಮೂಡಿಸಿ: ತಬಸುಮ್

0
85

ಕಲಬುರಗಿ: ವಿಶ್ವದಾದ್ಯಂತ ಹರಡಿರುವ ಕೋರೊನಾ ವೈರಸ್ ಜನಸಾಮಾನ್ಯರಲ್ಲಿ ಒಂದು ಭಯದ ವಾತಾವರಣವನ್ನು ನಿರ್ಮಿಸಿದೆ. ಜನಸಾಮಾನ್ಯರಲ್ಲಿ ಭಯದ ಮನೆ ಮಾಡಿರುವ ಕೋರೊನಾ ವೈರಸ್‌ನ ಭಯವನ್ನು ಜಾಗೃತಿ ಮೂಡಿಸುವುದರ ಮೂಲಕ ಹೋಗಲಾಡಿಸಬೇಕು ಶ್ರಮಿಸಬೇಕು. ಈ ಕೋರನ್ ವೈರಸ್ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ದೇಶದ್ಯಾಂತ ೧೪೪ ಜಾರಿಗೆ ತರುವುದರ ಮೂಲಕ ದೇಶ ಮತ್ತು ರಾಜ್ಯ ಲಾಕ್ ಡೌನ್ ಮಾಡಿರುವುದು ಸ್ವಾಗತಾರ್ಹವಾಗಿದೆ. ಅಂಗವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಎಲ್ಲಾ ಸ್ವಯಂ ಸೇವಕರು ಜಾಗೃತೆಯಿಂದ ಕಾರ್ಯವನ್ನು ನಿರ್ವಹಿಸಬೇಕು ಎಂದು ಕಮಲಾಪೂರ ತಹಸೀಲ್ದಾರ್ ಅಂಜುಮ್ ತಬಸುಮ್ ಅವರು ಕಿವಿ ಮಾತು ಹೇಳಿದರು.

ಕಮಲಾಪೂರ ತಾಲೂಕಿನ ಓಕಳ್ಳಿ ಗ್ರಾಮ ಪಂಚಾಯತಿಯಲ್ಲಿ ಕೋರನ್ ವೈರಸ್ ಕುರಿತು ಸಾರ್ವಜನಿಕರಿಗೆ ಜಾಗೃತಿಯನ್ನುದ್ದೇಶಿಸಿ ಮಾತನಾಡುತ್ತಾ ಅವರು, ಕೋರೊನಾ ವೈರಸ್‌ನಿಂದಾಗಿ ದೇಶವೇ ಲಾಕ್ ಡೌನ್ ಆದಾಗಿನಿಂದ ಬರೀ ದವಸ ಧಾನ್ಯಗಳನ್ನೇ ಹಂಚುತ್ತಿದ್ದಾರೆ. ಜನರು ಹಸಿವಿನಿಂದ ಒದ್ದಾಡುತ್ತಿದ್ದಾರೆಂದು ದವಸ ಧಾನ್ಯಗಳನ್ನೆ ಹಂಚುತ್ತಿರುವಾಗ ಕೋರೋನಾ ವೈರಸ್ ವಿರುದ್ದ ಹೋರಾಡುತ್ತಿರುವ ವೈದ್ಯರು, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಸಮಾಜದ ಕಳಕಳಿ ಇರುವಂತಹ ವ್ಯಕ್ತಿಗಳಿಗೆ ಓಕಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಹ್ಯಾಂಡ್ ಗ್ಲೋಸ್ಜ್, ಮಾಸ್ಕ್, ಸೇನಿಟೈಜರ್‌ಗಳನ್ನು ಉಚಿತವಾಗಿ ಹಂಚುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.

Contact Your\'s Advertisement; 9902492681

ಓಕಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಶೆಟ್ಟಿ ಓಕಳ್ಳಿ ಅವರು ಮಾತನಾಡುತ್ತಾ, ಈ ಕೋರನ್ ವೈರಸ್ ಬಗ್ಗೆ ಜಾಗೃತೆಯಿಂದ ಇರಬೇಕು ಹಾಗೂ ಸಣ್ಣ ಜ್ವರ್ ಖೇಮ್ಮು ಕಾಣಿಸಿಕೊಂಡರೆ ಕೂಡಲೇ ಆಶಾ ಕಾರ್ಯಕರ್ತೆರ ಗಮನಕ್ಕೆ ತಂದು ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸಾ ಕ್ರಮಗಳು ಮಾಡಿಸಿಕೋಳ್ಳಬೇಕೆಂದು ಗ್ರಾಮಸ್ಥರಲ್ಲಿ ವಿನಂತಿ ಮಾಡಿಕೊಂಡರು.

ಈ ಕೋರನ್ ವೈರಸ್ ತಡೆಗಟ್ಟಲು ರಾಜ್ಯದ ಎಲ್ಲಾ ವೈದ್ಯಾದಿಕಾರಿಗಳು ನರ್ಸಗಳು ವಾರ್ಡ ಬಾಯಿಗಳು ಪೋಲಿಸ್‌ರು ಆಶಾ ಕಾರ್ಯಕರ್ತೆರು ಅಂಗನವಾಡಿ ಶಿಕ್ಷಕಿಯರು ೨೮ ಗಂಟೆಗಳ ಕಾಲ ಅವರು ಸೇವೆಯನ್ನು ಮಾಡುತ್ತಿದ್ದಾರೆ ಅವರಿಗೆಲ್ಲಾ ನಾನು ನಮ್ಮ ಓಕಳ್ಳಿ ಗ್ರಾಮ ಪಂಚಾಯತ್ ವೃತ್ತಿಯಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಗ್ರಾಮದಲ್ಲಿ ಕೋರನ್ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಈಗಾಗಲೇ ೩೦೦೦ ಮಾಸ್ಕಗಳು ಮತ್ತು ೩೫೦ ಸೈನಿಟೇಜಗಳು ಕೂಡ ಆರ್ಡರ್ ಮಾಡಲಾಗಿದೆ ಮತ್ತು ೧೦೦ ಲೀಟರ್ ಪ್ಯಾನಲ್ ಕೂಡ ಆರ್ಡರನ್ನು ಮಾಡಲಾಗಿದೆ ಇನ್ನು ಎರಡು ದಿನಗಳ ನಂತರ ಇವುಗಳು ಬಂದಮೇಲೆ ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ಹಂಚಲಾಗುತ್ತದೆ ಎಂದರು.

ಕೋರನ್ ವೈರಸ್ ತಡೆಗಟ್ಟಲು ಕೆಲಸವನ್ನು ಮಾಡುತ್ತಿರುವ ಆಶಾ ಕಾರ್ಯಕರ್ತೆರಿಗೆ ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಓಕಳ್ಳಿ ಗ್ರಾಮ ಪಂಚಾಯಿಂದ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ಆಶಾ ಕಾರ್ಯಕರ್ತೆರಿಗೂ ಹಾಗೂ ಅಂಗನವಾಡಿ ಶಿಕ್ಷಕಿಯರಿಗೂ ಇಂದು ಉಚಿತವಾಗಿ ಸುರಕ್ಷಿತ ಸ್ಕಿಟ್ ಗಳು ಹಾಗೂ ಹ್ಯಾಂಡ್ ಗ್ಲೋಸ್ಜ್ ಗಳು ಮತ್ತು ಸೈನಿಟೇಜಗಳು ಹಾಗೂ ಮಾಸ್ಕ್‌ಗಳು ಗ್ರಾಮ ಪಂಚಾಯಿತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಕಮಲಾಪೂರ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಆರಾಧನಾ, ಅಲ್ಲಾಭಕ್ಷ, ಪುಷ್ಪ, ವಿನೋದ ತಲಾಟೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮತ್ತು ಪೋಲಿಸ್ ಅಧಿಕಾರಿಗಳು ಮತ್ತು ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಉಪಾಧ್ಯಕ್ಷರು ಮತ್ತು ಸಧ್ಯಸ್ಯರು ಮತ್ತು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here