ಮೈಸೂರು: ಇಂದು ನಗರದ ಅರಳಿಕಟ್ಟೆಯ ಹತ್ತಿರ ಡಾ. ಅಂಬೇಡ್ಕರ್ ಯುವಕರ ಸಂಘ ವತಿಯಿಂದ ಸರಕಾರದ ನಿಯಮ ಪಾಲಿಸುವ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ರವರ 129 ನೇ ಜಯಂತಿಯನ್ನು ಸರಳವಾಗಿ ಆಚರಿಸಿ, ಜನರಿಗೆ ಮಾಸ್ಕ್ ಹಾಗೂ ಉಪಹಾರದ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಶೋಕಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಸಿದ್ದರಾಜು, ಟಿ. ಗೋವಿಂದರಾಜು ಡಾ. ಬಿ. ಆರ್. ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರು ಆದ ಪ್ರಶಾಂತ್. ಜಿ. ಆರ್, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ನವಚೈತನ್ಯ ಪದಾಧಿಕಾರಿಗಳಾದ ಮೋಹನ್ ಎಂ.ಜಿ, ಹೇಮಂತ್, ಕೆಂಪರಾಜು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಗ್ರಾಮದ ಜನರು ಉಪಸ್ಥಿತರಿದ್ದರು.