ಸುರಪುರ: ನಗರದ ರಂಗಂಪೇಟೆಯ ದೇವಿಕೇರಾ ರಸ್ತೆಯಲ್ಲಿರುವ ಮದರಸಾ ಅಹಯಾ ಉಲೂಮ್ ಆವರಣದಲ್ಲಿ ತೈಯಬಾ ಟ್ರಸ್ಟ್ ವತಿಯಿಂದ ನೂರು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಟ್ ವಿತರಿಸಿದ ನಗರ ಠಾಣೆಯ ಆರಕ್ಷಕ ನಿರೀಕ್ಷಕ ಎಸ್.ಎಮ್.ಪಾಟೀಲ ಮಾತನಾಡಿ,ಇಂದು ಕೊರೊನಾ ವೈರಸ್ ಜಗತ್ತನ್ನು ತಲ್ಲಣಗೊಳಿಸಿದೆ,ಇದರಿಂದಾಗಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಜನತೆ ಮನೆಯಲ್ಲಿರುವ ಮೂಲಕ ಕೆಲಸ ಕಾರ್ಯಗಳಿಲ್ಲದೆ ಜೀವನ ನಡೆಸಲು ತೊಂದರೆ ಪಡುವಂತಾಗಿದೆ.ಜನರ ಕಷ್ಟವನ್ನು ಅರಿತು ತೈಯಬಾ ಟ್ರಸ್ಟ್ ನೂರು ಕುಟುಂಬಗಳಿಗೆ ಅಗತ್ಯ ವಸ್ತುಗಳ ನೀಡುವ ಮೂಲಕ ಮಾನವಿಯತೆ ಮೆರೆದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಅಸಗರ್ ಹುಸೇನ್ ಕಾರ್ಯಕ್ರಮದ ನೇತೃತ್ವ ವಹಸಿ ಮಾತನಾಡಿ,ಯಾವುದೆ ಸಂಘ ಸಂಸ್ಥೆ ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಿರುವುದು ಅವಶ್ಯವಾಗಿದೆ.ಇದನ್ನು ಮನಗಂಡು ಇಂದು ಜನರ ಕಷ್ಟಕ್ಕೆ ಸ್ಪಂಧಿಸುವತ್ತ ಮುಂದಾಗಿರುವುದಾಗಿ ತಿಳಿಸಿದರು.
ನಂತರ ಅನೇಕ ಕುಟುಂಬಗಳ ಜನರು ಸರತಿ ಸಾಲಲ್ಲಿ ಸಾಮಾಜಿಕ ಅಂತರ ಮೂಲಕ ನಿಂತು ಆಹಾರ ಧಾನ್ಯಗಳ ಕಿಟ್ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಅಬ್ದುಲಗಫೂರ ನಗನೂರಿ,ಶೇಖ ಮಹಿಬೂಬ ಒಂಟಿ ಸೇರಿದಂತೆ ಅನೇಕರಿದ್ದರು.