ಎರಡೂ ಹೊಟೇಲ್‍ಗಳನ್ನು ಡಿ.ಹೆಚ್.ಓ. ಅವರಿಗೆ ಹಸ್ತಾಂತರಿಸಲು ಡಿ.ಸಿ. ಆದೇಶ

0
57

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಸೊಂಕಿತರಿಗಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ಕಲಬುರಗಿ ನಗರದ ಗ್ರ್ಯಾಂಡ್ ಹೊಟೇಲ್ ಹಾಗೂ ಆದಿತ್ಯ ಹೊಟೇಲ್‍ಗಳ ವ್ಯವಸ್ಥಾಪಕರು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹೊಟೇಲ್‍ಗಳನ್ನು ಹಸ್ತಾಂತರಿಸಬೇಕೆಂದು ಕಲಬುರಗಿ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಸಾಂಕ್ರಾಮಿಕ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ Disaster Management Act 2005,, ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಈ ಆದೇಶ ಹೊರಡಿಸಿದ್ದು, ಮೇಲ್ಕಂಡ ನಗರದ ಎರಡೂ ಹೊಟೇಲ್‍ಗಳ ವ್ಯವಸ್ಥಾಪಕರು ತಕ್ಷಣವೇ ಹೊಟೇಲ್‍ಗಳನ್ನು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಸ್ತಾಂತರಿಸಬೇಕೆಂದು ಡಿ.ಸಿ. ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here