ಕೊರೊನಾ ಎಫೆಕ್ಟ್: ಭತ್ತ ಖರೀದಿದಾರರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತ

0
18

ಸುರಪುರ: ಕೊರೊನಾ ಲಾಕ್‌ಡೌನ್ ಘೋಷಣೆಯಾದಾಗಿನಿಂದ ನಿತ್ಯವು ಅನೇಕ ವರ್ಗಗಳ ಜನರು ತೀವ್ರತರವಾದ ಸಂಕಷ್ಟವನ್ನು ಹೆದರಿಸುತ್ತಿದ್ದಾರೆ.ಇಂತಹ ಸಂಕಷ್ಟಕ್ಕೆ ಸಿಲುಕಿದವರ ಸಾಲಿನಲ್ಲಿ ಇಂದು ಭತ್ತ ಬೆಳೆದ ರೈತರು ಬಂದು ನಿಂತಿದ್ದು ಕೊರೊನಾ ಎಫೆಕ್ಟ್ ಭತ್ತ ಬೆಳೆದ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.

ಈಗಾಗಲೆ ಪ್ರತಿ ವರ್ಷದಂತೆ ಈ ವರ್ಷವು ಎಪ್ರಿಲ್ ತಿಂಗಳಲ್ಲಿ ತಾಲೂಕಿನ ಸಾವಿರಾರು ರೈತರು ಭತ್ತದ ರಾಶಿ ಮಾಡಿ ಫಸಲನ್ನು ರಸ್ತೆಗಳ ಬದಿಯಲ್ಲಿ,ಬಯಲಿನಲ್ಲಿ ಒಣಗಲು ಹಾಕಿ ಖರೀದಿದಾರರು ಬರುವರೆಂದು ಎದರು ನೋಡುತ್ತಿದ್ದಾರೆ.ಆದರೆ ಖರೀದಿದಾರರು ಬಾರದೆ ತೀವ್ರ ಸಂಕಷ್ಟ ಹೆದರಿಸುವಂತಾಗಿದೆ.ಅತ್ತ ಸಾಲಶೂಲಮಾಡಿ ಬೆಳೆ ಬೆಳೆದು ಈಗ ಖರೀದಿಯಾಗದೆ ಬೆಳೆ ಬಿಸಿಲಲ್ಲಿ ಒಣಗುತ್ತಿದ್ದರೆ ಅತ್ತ ರೈತನ ಬದುಕುಕೂಡ ಸಾಲದಿಂದ ಬೇಯುತ್ತಿದೆ.ಇದಕ್ಕೆ ಕಾರಣ ಕೊರೊನಾ ಎಫೇಕ್ಟ್.

Contact Your\'s Advertisement; 9902492681

ಕೊರೊನಾ ಲಾಕ್‌ಡೌನ್ ಘೋಷಣೆಯಿಂದಾಗಿ ಎಲ್ಲಾ ಅಕ್ಕಿ ಮಿಲ್‌ಗಳು ಬಂದಾಗಿದ್ದು,ವಾಹನಗಳ ಓಡಾಟವು ನಿಂತಿದೆ.ಇನ್ನು ಭತ್ತ ಖರೀದಿದಾರರು ಭತ್ತ ಖರೀದಿ ಮಾಡದೆ ಧಾರಣೆ ಇಲ್ಲದೆ ಕೈಕಟ್ಟಿ ಕುಳಿತಿದ್ದಾರೆ.ರೈತರು ಬೆಳೆದ ಭತ್ತ ದಿನಾಲು ಬಿಸಿಲಲ್ಲಿ ಒಣಗಿ ತುಕ ಕಡಿಮೆಯಾಗುವ ಜೊತೆಗೆ ಭತ್ತ ಉಜ್ಜಿದರೆ ಚೂರು ಚೂರಾಗಿ ಬೆಲೆ ಕಡಿಮೆಯಾಗುವ ಭೀತಿಯು ಕಾಡಲಾರಂಭಿಸಿದೆ. ಇದರ ಕುರಿತು ತಾಲೂಕಿನ ಬಾದ್ಯಾಪುರ ಗ್ರಾಮದ ರೈತ ಮಲ್ಲಿಕಾರ್ಜುನ ಬಾದ್ಯಾಪುರ ಮಾತನಾಡಿ, ಸಾಲ ಮಾಡಿ ಈವರ್ಷ ಒಳ್ಳೆ ಬೆಳೆ ಬೆಳೆದು ಸಾಲ ತೀರಿಸಿ ಒಂದಿಷ್ಟು ಜೀವನ ಸುಧಾರಿಸಿಕೊಳ್ಳಬಹುದು ಎಂಬ ನಂಬಿಕೆಯಲ್ಲಿ ಭತ್ತ ಬೆಳೆದೆವು,ಆದರೆ ಕೊರೊನಾ ಬಂದು ಬೆಳೆದ ಭತ್ತವನ್ನು ಖರೀದಿ ಮಾಡುವವರಿಲ್ಲದೆ ತೀವ್ರ ಸಂಕಷ್ಟಪಡುವಂತಾಗಿದೆ. ಇತ್ತ ಸರಕಾರವಾದರು ರೈತರ ನೆರವಿಗೆ ಬಂದು ಭತ್ತ ಖರೀದಿ ಕೇಂದ್ರ ಆರಂಭಿಸಬೇಕಿತ್ತು,ಭತ್ತ ಖರೀದಿಯು ಮಾಡದೆ,ಲಾಕ್‌ಡೌನ್ ಸಡಿಲಿಕೆಯೂ ಮಾಡದೆ ಖರೀದಿದಾರರು ಬಾರದೆ ನಮ್ಮ ಗೋಳು ಹೇಳತೀರದಂತಾಗಿದೆ ಎಂದು ತಮ್ಮ ನೋವು ತೋಡಿಕೊಳ್ಳುತ್ತಾರೆ.

ಈಗಾಗಲೆ ಮೊದಲಿನಿಂದಲು ತೀವ್ರ ಸಂಕಷ್ಟ ಹೆದರಿಸುತ್ತಿರುವ ರೈತರು ಈಗ ಕೊರೊನಾ ಕಾರಣದಿಂದ ಮತ್ತಿಷ್ಟು ತೊಂದರೆಗೆ ಸಿಲುಕಿದ್ದೇವೆ.ಭತ್ತ ನೆಲದಲ್ಲಿ ಒಣಗಿ ಹಾಳಾಗುತ್ತಿದೆ.ಸರಕಾರ ಕೂಡಲೆ ಖರೀದಿ ಆರಂಭಿಸಿ ರೈತರಿಗೆ ನೆರವಾಗಬೇಕೆಂದು ಒತ್ತಾಯಿಸುತ್ತೇವೆ. -ಮಲ್ಲಿಕಾರ್ಜುನ ಸತ್ಯಂಪೇಟೆ ರಾಜ್ಯ ರೈತ ಸಂಘದ ಕಾರ್ಯದರ್ಶಿ 

ಮತ್ತೋರ್ವ ರೈತ ಸೋಮಶೇಖರ ಕುರಿ ಮಾತನಾಡಿ,ಸ್ವಂತ ಹೊಲದಲ್ಲಿ ಭತ್ತ ಬೆಳೆದರೆ ಪರವಾಗಿಲ್ಲ ಕಡಿಮೆ ಲಾಸ್ ಆಗಲಿದೆ.ಅದೇ ಲೀಸ್ ಪಡೆದ ಹೊಲದಲ್ಲಿ ಭತ್ತ ಬೆಳೆದು ಜಮೀನ ಮಾಲೀಕರಿಗೆ ಲೀಸ್ ನಿಡುವ ಜೊತೆಗೆ ನಾವು ಮಾಡುವ ಎಕರೆಗೆ ಸುಮಾರು ೨೦ ಸಾವಿರ ರೂಪಾಯಿಗಳ ಸಾಲದ ಹಣ ನೀಡಿದಲ್ಲಿ ನಮಗೆ ಎಕರೆಗೆ ಸುಮಾರು ೫ ರಿಂದ ೧೦ ಸಾವಿರ ಸಾಲ ಹೆಚ್ಚಾಗಲಿದೆ.ಅಲ್ಲದೆ ಈಗ ಭತ್ತ ಒಣ ನೆಲದಲ್ಲಿ ಸುರಿವಿದ್ದು ಮಳೆ ಮೋಡದ ಭಯವು ಶುರುವಾಗಿದೆ.ಭತ್ತದ ಮೇಲೆ ಮುಚ್ಚಲು ತಾರಪಲ್ ಕೂಡ ಸಿಗುತ್ತಿಲ್ಲ,ಲಾಕ್‌ಡೌನ್ ಕಾರಣದಿಂದ ಯಾವುದೆ ಅಂಗಡಿಗಳು ತೆಗೆಯದೆ ಏನು ಸಿಗದಂತಾಗಿದೆ.ಆದ್ದರಿಂದ ಸರಕಾರ ಕೂಡಲೆ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here