ಎಸ್‌ಯುಸಿಐ ಸಂಸ್ಥಾಪನಾ ದಿನ: ಬಡವರ ಬದುಕಿನ ಆಸರೆಗಳನ್ನು ಕೊಂದಿದೆ ಕೊರೊನಾ

0
43

ವಾಡಿ: ಕೊರೊನಾ ವೈರಸ್ ದಾಳಿಯಿಂದ ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ದುಡಿಯುವ ಜನರ ಬದುಕಿನ ಆಸರೆಗಳನ್ನೇ ಕೊರೊನಾ ಕೊಂದು ಹಾಕಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ, ವಾಡಿ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪಾ ಆರ್.ಕೆ ಹೇಳಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ೭೩ನೇ ಸಂಸ್ಥಾಪನಾ ದಿನದ ನಿಮಿತ್ತ ಸಂಸ್ಥಾಪಕ ಅಧ್ಯಕ್ಷ ಕಾಮ್ರೇಡ್ ಶಿವದಾಸ ಘೋಷ್ ಅವರ ಭಾವಚಿತ್ರಕ್ಕೆ ಕೆಂಪು ನಮನ ಸಲ್ಲಿಸಿ ಅವರು ಮಾತನಾಡಿದರು. ಕೊರೊನಾದಿಂದ ಬಂಡವಾಳಶಾಹಿ ಪ್ರಣೀತ ಅಭಿವೃದ್ಧಿಯು ಎಂತಹದ್ದು ಎಂಬುದನ್ನು ಬಯಲುಗೊಳಿಸಿದೆ. ಎಲ್ಲಾ ಸರಕಾರಗಳು ಬಂಡವಾಳಶಾಹಿ ಪರವಾದ ನೀತಿಗಳನ್ನು ಅಪ್ರಜಾಸತ್ತಾತ್ಮಕವಾಗಿ ಜನಗಳ ಮೇಲೆ ಹೇರುತ್ತಿವೆ. ಜನರನ್ನು ಜಾತಿ, ಧರ್ಮ, ಆಹಾರ, ಭಾಷೆ, ಗಡಿ ಹೀಗೆ ಅನೇಕಾನೇಕ ರೀತಿಯಲ್ಲಿ ಒಗ್ಗಟ್ಟು ಒಡೆದು ಹಾಕಲಾಗುತ್ತಿದೆ. ಇಂತಹ ಕೀಳು ರಾಜಕೀಯಕ್ಕೆ ಪರ್ಯಾಯವಾಗಿ ಭಗತ್‌ಸಿಂಗ್, ನೇತಾಜಿ ಮುಂತಾದ ಕ್ರಾಂತಿಕಾರಿಗಳ ಸಂಧಾನತೀತ ಹೋರಾಟ ಪರಂಪರೆಯನ್ನು ಎತ್ತಿಹಿಡಿಯಲು ಜನತೆ ಮುಂದೆ ಬರಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಠಿಯಾಗಿದ್ದು, ಸಂಪತ್ತು ಸೃಷ್ಠಿಸುವ ದುಡಿಯುವ ವರ್ಗ ತೀವ್ರ ಸಂಕಷ್ಟದಲ್ಲಿದೆ. ದುಡಿಯುವ ವರ್ಗ ಅಧಿಕಾರಕ್ಕೆ ಬರಬೇಕು. ಮಾನವನಿಂದ ಮಾನವನ ಶೋಷಣಾರಹಿತ ಸಮಾಜವನ್ನು ನಿರ್ಮಿಸುವ ಕನಸಿನೊಂದಿಗೆ ಪಕ್ಷವನ್ನು ಕಟ್ಟಿರುವ ಮಹಾನ್ ಮಾರ್ಕ್ಸ್‌ವಾದಿ ಚಿಂತಕ ಕಾಮ್ರೇಡ್ ಶಿವದಾಸ ಘೋಷ್, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಿಂದ ಮಾತ್ರ ದೇಶದ ಜನತೆ ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತರಾಗಲು ಸಾಧ್ಯ ಎಂದು ವಿಶ್ಲೇಷಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಾರ್ಕ್ಸ್‌ವಾದ, ಲೆನಿನ್‌ವಾದ ಮತ್ತು ಕಾಮ್ರೇಡ್ ಶಿವದಾಸ ಘೋಷ ಅವರ ಚಿಂತನೆಗಳನ್ನು ಮತ್ತಷ್ಟು ಸಂಪತ್ಭರಿತಗೊಳಿಸಬೇಕಿದೆ ಎಂದರು.

ಪಕ್ಷದ ಸದಸ್ಯರಾದ ರಾಜು ಒಡೆಯರಾಜ, ಶರಣು ಹೇರೂರ, ಯೇಸಪ್ಪ ಕೇದಾರ, ಶ್ರೀಶರಣ ಹೊಸಮನಿ, ಅರುಣ ಹಿರೇಬಾನರ ಪಾಲ್ಗೊಂಡಿದ್ದರು. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಚಿರುವಾಯುವಾಗಲಿ ಎಂದು ಭಾಗವಹಿಸಿದ್ದ ಕೆಲವೇ ಜನ ಸಂಗಾತಿಗಳು ಘೋಷಣೆ ಕೂಗಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here