ಆಳಂದ: ಮೇ 11ರಿಂದ 15ವರೆಗೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ಆರಾಧ್ಯ ದೇವತೆ ಎಲ್ಲಮ ದೇವಿ ಜಾತ್ರೆ ರದ್ದುಗೊಂಡಿದೆ. ಎಂದು ದೇವಸ್ಥಾನದ ಕಮಿಟಿ ತಿಳಿಸಿದೆ.
ಈ ಕುರಿತು ದೇವಸ್ಥಾನದಲ್ಲಿ ಕರೆಯಲಾದ ಸಭೆಯಲ್ಲಿ ಜಾತ್ರೆ ರದ್ದು ಪಡಡಿಸಿರುವ ಬಗ್ಗೆ ನಿರ್ಧರಿಸಲಾಯಿತು.
ನಿಂಬರ್ಗಾ ಪಿ.ಎಸ್.ಐ ಸುರೇಶ್ ಕುಮಾರ ಗ್ರಾಮದ ಮುಖಂಡರಿಗೆ ಮಾತನಾಡಿ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಜಾತ್ರೆ ಮಾಡದಂತೆ ಸರಕಾ ಸೂಚನೆ ನೀಡಿದೆ. ಈ ಜಾತ್ರೆ ಯಲ್ಲಿ ಸುಮಾರು ಹತ್ತು ಸಾವಿರ ಜನ ಬೇರೆ ರಾಜ್ಯಗಳಿಂದ ಸೇರುತ್ತಾರೆ. ಸರಕಾರದ ಆದೇಶ ದಂತೆ ಜಾತ್ರೆ ರದ್ದು ಮಾಡಬೇಕು. ಗ್ರಾಮಸ್ಥರು ಮನೆಯಲ್ಲಿ ಇದ್ದು ಜಾತ್ರೆ ಆಚರಣೆ ಮಾಡಿ ಯಾರು ಜಾತ್ರೆ ಯ ನೆಪದಲ್ಲಿ ದೇವಸ್ಥಾನದ ಹತ್ತಿರ ಬರೋದು ತೆಂಗು ಒಡೆಯುದು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುದು ಎಂದು ಎಚ್ಚರಿಕೆ ನೀಡಿದರು.
ಪಿ.ಡಿ.ಓ ಯಲಗೊಂಡ ಹಿರೆಕುರಬರ ಮಾತಾಡಿ ಸರಕಾರ ನಮ್ಮ ಆರೋಗ್ಯ ಕ್ಕಾಗಿ ಜಾತ್ರೆ ಮಾಡದಂತೆ ತಿಳಿಸಿದೆ ಸಾರ್ವಜನಿಕರು ಸಹಕಾರ ನೀಡಿ ಕಾನೂನು ಉಲ್ಲಂಘನೆ ಮಾಡಬೇಡಿ ಎಂದರು.
ಸೆಕ್ಟರ್ ಅಧಿಕಾರಿ ಗ್ರಾಮಸ್ಥರು ದೇವಸ್ಥಾನ ಕಮೀಟಿ ಸದಸ್ಯರು ಇದ್ದರು.
-
ರಾಜಕುಮಾರ ಹಿರೇಮಠ