ಚಿತ್ತಾಪುರ: ತಾಲೂಕಿನಲ್ಲಿರುವ ಮದ್ಯದ ಅಂಗಡಿಗಳಾದ ಸಿಎಲ್-೨ ಸಿಎಲ್-೦೯( ಎಂಎಸ್‌ಐಎಲ್ ಮಳಿಗೆ) ಸನ್ನದುಗಳಿಗೆ ಮದ್ಯ ಮಾರಾಟ ಮಾಡಲು ಸರಕಾರ ಅನುಮತಿ ನೀಡಿದೆ, ಆದರೆ ಕ್ಲೋಸಿಂಗ್ ಸ್ಟಾಕ್ ಮತ್ತು ಓಪನಿಂಗ್ ಸ್ಟಾಕ್ ಪರೀಶಿಲಿಸಿ ಚಿತ್ರೀಕರಣ ಮಾಡುವ ಮೂಲಕ ವ್ಯತ್ಯಾಸ ಕಂಡು ಬಂದರೆ ಕೂಡಲೇ ತಪ್ಪಸ್ಥರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ಆನಂದ ಕಲ್ಲಕ್ ಮತ್ತು ದಲಿತ ಮಾದಿಗ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿಕರ್, ಮುಖಂಡ ನಾಗರಾಜರೆಡ್ಡಿ ಆಗ್ರಹಿಸಿದ್ದಾರೆ.
ಈ ಕುರಿತು ಮನವಿ ಪತ್ರ ಕೊಡಲು ಅಬಕಾರಿ ಇಲಾಖೆಗೆ ಹೋದರೆ ಅಲ್ಲಿ ಕಚೇರಿಗೆ ಬೀಗ ಹಾಕಲಾಗಿತ್ತು ಹೀಗಾಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ಕೋವಿಡ್-೧೯ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಎಲ್ಲ ಕಡೆ ಅಕ್ರಮ ಮದ್ಯ ಮಾರಾಟ ದುಪ್ಪಟ್ಟು ಮರ‍್ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಿದ್ದು ಜಗ್ಗಜಾಹಿರ ಎಷ್ಟೋ ಕಡೆ ಅಬಕಾರಿ ಇಲಾಖೆಯಿಂದ ಹಾಗೂ ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟ ಮಾಡುವಾಗ ದಾಳಿ ನಡೆಸಿ ಸೀಜ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಕೇವಲ ಕೇಲವೇ ಕೆಲವು ಮಾತ್ರ ಮಾದ್ಯಮಗಳಲ್ಲಿ ಬಿತ್ತಣವಾಗಿದೆ ಎಷ್ಟೋ ಕಡೆ ಕೇಸ್ ಕೂಡ ದಾಖಲಿಸಿಲ್ಲವೆಂದು ತಿಳಿದು ಬಂದಿರುತ್ತದೆ ಎಂದರು.
ಒಂದು ಅಂದಾಜಿನ ಪ್ರಕಾರ ಎಲ್ಲ ಮದ್ಯದ ಅಂಗಡಿಗಳಲ್ಲಿ ಕೊನೆಯ ಸಂಗ್ರಹ ಇದಿದ್ದು ಈಗ ಅಂದರೆ ಮರು ಪ್ರಾರಂಭ ಸಂಗ್ರಹ ಪೂರ್ಣ ಪ್ರಮಾಣದಲ್ಲಿ ಖಾಲಿಯಾಗಿರುತ್ತದೆ ಎಂದು ತಿಳಿದು ಬಂದಿರುತ್ತದೆ, ಆದಕಾರಣ ಅಬಕಾರಿ ಸಚಿವರ ಆದೇಶದನ್ವಯ ಕ್ಲೋಸಿಂಗ್ ಸ್ಟಾಕ್ ಮತ್ತು ಓಪನಿಂಗ್ ಸ್ಟಾಕ್ ನ ಕುರಿತು ತಾಲೂಕಿನ ಎಲ್ಲ ಮದ್ಯದ ಅಂಗಡಿಗಳನ್ನು ಕೂಲಂಕೂಷವಾಗಿ ಪರೀಶಿಲಿಸಬೇಕು ಒಂದು ವೇಳೆ ವತ್ಯಾಸ ಕಂಡು ಬಂದಲ್ಲಿ ಅಂತಹ ಮದ್ಯದ ಅಂಗಡಿಗಳ ಪರವಾನಿಗೆ ರದ್ದು ಮಾಡುತ್ತೇವೆ ಎಂದು ಹೇಳಿರುತ್ತಾರೆ.
ಹಾಗಾಗಿ ಕೊರೊನಾ ಲಾಕ್‌ಡೌನ್ ನಡುವೆಯೂ ಹಗಲಿರಳು ದುಡಿದರೂ ತಮ್ಮ ನಿಷ್ಪಕ್ಷಪಾತವಾದ ಸೇವೆಯನ್ನು ನಿರ್ಲಕ್ಷ್ಯಸಿ ಅಕ್ರಮ ಮದ್ಯ ಮಾರಾಟ ಮಾಡಿದ್ದರಿಂದ ಅಂತವರ ವಿರುದ್ದ ಕಾನೂನು ಬದ್ದವಾಗಿ ಕೂಲಂಕುಷವಾಗಿ ವಿಡಿಯೋ ಚಿತ್ರೀಕರಣ ಮೂಲಕ ಕ್ಲೋಸಿಂಗ್ ಸ್ಟಾಕ್ ಮತ್ತು ಓಪನಿಂಗ್ ಸ್ಟಾಕ್ ಪರೀಶಿಲಿಸಿ ತಪ್ಪಸ್ಥರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.