ಗುಳೆ ಹೋಗಿ ಬಂದ ಇನ್ನೂರೈವತ್ತಕ್ಕು ಹೆಚ್ಚು ಜನರ ಫೀವರ್ ಚೆಕ್

0
76

ಸುರಪುರ: ಇದುವರೆಗೆ ಎಲ್ಲರ ಆರೋಗ್ಯ ಚೆಕಪ್ ಮಾಡಿ ಕೊರೊನಾ ವೈರಸ್‍ನ ಲಕ್ಷಣಗಳಿಲ್ಲದ ಕುರಿತು ಸಂತೋಷದಿಂದಿದ್ದ ತಾಲೂಕಿನ ಜನರಲ್ಲಿ ಈಗ ಮತ್ತೆ ಢವ ಢವ ಶುರುವಾಗಿದೆ.ಇದುವರೆಗೆ ಬೆಂಗಳೂರು ಮತ್ತಿತರೆಡೆ ಗುಳೆ ಹೋಗಿ ಬಂದಿದ್ದ ಸಾವಿರಾರು ಸಂಖ್ಯೆಯ ಜನರನ್ನು ಚೆಕಪ್ ಮಾಡಿ ಯಾವುದೆ ಕೊರೊನಾ ಲಕ್ಷಣಗಳಿಲ್ಲದ್ದರಿಂದ ನೆಮ್ಮದಿಯುಂಟಾಗಿತ್ತು,ಆದರೆ ಈಗ ಬೆಂಗಳೂರಲ್ಲಿ ಇದುವರೆಗೆ ಉಳಿದುಕೊಂಡಿದ್ದ ಕಾರ್ಮಿಕರು ಆಗಮಿಸುತ್ತಿದ್ದು ಮತ್ತೆ ಫೀವರ್ ಚೆಕಪ್ ಆರಂಭಿಸಲಾಗಿದೆ.

ಬೆಂಗಳೂರಿನಿಂದ ಇಪ್ಪತ್ತು ಬಸ್‍ಗಳಲ್ಲಿ ಆಗಮಿಸಿದ್ದ ಎರಡು ನೂರ ಐವತ್ತಕ್ಕು ಹೆಚ್ಚು ಜನರಿಗೆ ಸರತಿ ಸಾಲಿನಲ್ಲಿ ಇಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಫೀವರ್ ಚೆಕ್ ಮಾಡಿಸಿಕೊಳ್ಳುತ್ತಿದ್ದರೆ ಜನರಲ್ಲಿ ಯಾರಲ್ಲಿ ಫೀವರ್ ಇದೆಯೊ ಎಂದು ಯೋಚಿಸುವಂತಾಗಿತ್ತು.ಬೆಳಿಗ್ಗೆಯಿಂದ ಆರಂಭಗೊಂಡ ಫೀವರ್ ಚೆಕಪ್ ಮದ್ಯಾನದ ವೇಳೆಗೆ ಮುಗಿಯಿತು.

Contact Your\'s Advertisement; 9902492681

ಇಂದಿನ ಚೆಕ್‍ಪ್ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ಇಂದು ಬೆಂಗಳೂರಿನಿಂದ ಬಂದವರು ಮತ್ತಿತರರು ಸೇರಿ ಒಟ್ಟು ನಾಲ್ಕು ನೂರು ಜನರನ್ನು ಚೆಕ್ ಮಾಡಲಾಗಿದೆ.ಯಾರಲ್ಲೂ ಕೊರೊನಾ ಲಕ್ಷಣ ಕಂಡು ಬಂದಿಲ್ಲ.ನಾಳೆ ಇನ್ನೂ ಇಪ್ಪತ್ತು ಬಸ್‍ಗಳಲ್ಲಿ ಜನ ಬರಲಿದ್ದಾರೆ ಎಂದು ಮಾಹಿತಿ ಇದೆ.ನಾಳೆ ಬರುವವರನ್ನು ಡಾ:ಬಿ.ಆರ್.ಅಂಬೇಡ್ಕರ್ ಕಾಲೇಜು ಆವರಣದಲ್ಲಿಯೆ ಬಸ್‍ಗಳ ನಿಲ್ಲಿಸಿ ಒಂದೊಂದು ಬಸ್‍ನ ಜನರನ್ನು ಕರೆಯಿಸಿ ಫೀವರ್ ಚೆಕ್ ಮಾಡಲಾಗುವುದು.ಅಲ್ಲದೆ ನಾಳೆಯಿಂದ ಹುಣಸಗಿ ಮತ್ತು ಕೆಂಭಾವಿ ಭಾಗದವರನ್ನು ಅಲ್ಲಿಯ ಆಸ್ಪತ್ರೆಗಳಲ್ಲಿಯೆ ಫೀವರ್ ಚೆಕ್ ಮಾಡಲು ಕಳುಹಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಫೀವರ್ ಚೆಕ್ ಮಾಡಿಸಿಕೊಳ್ಳಲು ಬಂದವರನ್ನು ಸರತಿ ಸಾಲಲ್ಲಿ ನಿಲ್ಲಿಸುವ ಜೊತೆಗೆ ಸಾಮಾಜಿಕ ಅಂತರವನ್ನು ಪಾಲಿಸಲು ಕ್ರಮ ಕೈಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here