ಸುರಪುರ: ಕಳೆದ ನಲವತ್ತು ದಿನಗಳಿಂದ ಲಾಕ್‍ಡೌನ್ ಘೋಷಣೆಯಿಂದಾಗಿ ಬಾಗಿಲು ಮುಚ್ಚಿದ್ದ ಮದ್ಯದಂಗಡಿಗಳು ಇಂದು ತೆರೆದಿದ್ದರಿಂದ ಪಾನ ಪ್ರಿಯರು ಬೆಳಿಗ್ಗೆಯಿಂದ ಸರತಿ ಸಾಲಲ್ಲಿ ನಿಂತು ಮದ್ಯ ಖರೀದಿ ಮಾಡಿದರು.
ಬೆಳಿಗ್ಗೆ ಒಂಬತ್ತು ಗಂಟೆಗೆ ಬಾರ್‍ಗಳು ತೆರೆಯುತ್ತಿದ್ದಂತೆ ಖಷಿಗೊಂಡ ಮದ್ಯಪ್ರಿಯರು ಕೆಲ ಬಾರ್‍ಗಳ ಮುಂದೆ ಕುಣಿದಾಡಿದ ದೃಷ್ಯಗಳು ಕಂಡುಬಂದವು.ಎಲ್ಲಾ ಬಾರ್‍ಗಳ ಮುಂದೆ ಪೊಲೀಸರು ಜನರನ್ನು ನಿಯಂತ್ರಿಸಲು ಪ್ರಯಾಸ ಪಡುವಂತಾಯಿತು.ಅಲ್ಲದೆ ಬಾರ್ ಮಾಲೀಕರು ಕೂಡ ತಮ್ಮ ಮೂರು ನಾಲ್ಕು ಜನ ಖಾಸಗಿ ನೌಕರರನ್ನು ನೇಮಿಸಿಕೊಂಡು ಸಾಮಾಜಿಕ ಅಂತರ ಕಾಪಾಡಲು ಹಾಗು ಮಾಸ್ಕ್ ಧರಿಸುವಂತೆ ತಿಳಿಸುತ್ತಿದ್ದರು.
ಬಾರ್ ಕೌಂಟರ್ ಸಮೀಪ ಹೋಗುತ್ತಿದ್ದಂತೆ ಪ್ರತಿಯೊಬ್ಬ ಖರೀದಿದಾರನಿಗೂ ಸ್ಯಾನಿಟೈಜರ್ ನೀಡಿ ಕೈ ಸ್ವಚ್ಛಗೊಳಿಸಿಕೊಳ್ಳಲು ಅನುವು ಮಾಡಿಕೊಟ್ಟರು.ಅಲ್ಲದೆ ಮಾಸ್ಕ್ ಧರಿಸದವರಿಗೆ ಮದ್ಯ ನೀಡುವುದಿಲ್ಲವೆಂದು ಎಚ್ಚರಿಸುತ್ತಿದ್ದರು.
ಈ ಕುರಿತು ರಾಘವೇಂದ್ರ ವೈನ್ಸ್ ಮಾಲೀಕ ಭೀಮಯ್ಯ ಕಡೇಚೂರ ಮಾತನಾಡಿ,ಸರಕಾರದ ನಿಯಮದಂತೆ ಇಂದು ಮದ್ಹ್ಯಾನ ಮೂರು ಗಂಟೆಯವರೆಗೆ ಮಾತ್ರ ಮದ್ಯ ಮಾರಾಟ ಮಾಡಲಾಗುವುದು,ಅಲ್ಲದೆ ಒಬ್ಬರಿಗೆ 2.3 ಲೀಟರ್ ವರೆಗೆ ಮದ್ಯ ನೀಡಬಹುದೆಂದು ನಿಯಮ ರೂಪಿಸಲಾಗಿದೆ. ಪ್ರತಿಯೊಬ್ಬರಿಗೂ ನಿಯಮದಷ್ಟೆ ಮದ್ಯವನ್ನು ಮಾರಾಟ ಮಾಡಲಾಗುವುದು ಅಲ್ಲದೆ ಒಂದು ಬಾರಿ ಖರೀದಿ ಮಾಡಿದವರಿಗೆ ಮತ್ತೊಮ್ಮೆ ಖರೀದಿಗೆ ಅವಕಾಶ ನೀಡುವುದಿಲ್ಲ ಎಂದರು ತಿಳಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪಾನ ಪ್ರಿಯರು ಸುಮಾರು ನೂರಾರು ಮೀಟರ್ ಗಟ್ಟಲೆ ಕ್ಯೂ ನಿರ್ಮಿಸಿಕೊಂಡು ನಿಂತಿದ್ದರಿಂದ ವಾಹನ ಸವಾರರು ತೊಂದರೆ ಪಡುವಂತಾಯಿತು.ಮದ್ಯಕ್ಕಾಗಿ ಜನರು ಸುಡು ಬಿಸಿಲಲ್ಲಿ ಕ್ಯೂ ನಿಂತಿದ್ದನ್ನು ನೋಡಿದ ಜನರು ಮಜಾ ತೆಗೆದುಕೊಂಡರು.