ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು: ಸುರೇಶ ವರ್ಮಾ

0
43

 

ಶಹಾಬಾದ: ತಾಲೂಕಾಢಳಿತದ ಆದೇಶಗಳನ್ನು ನಿಯಮನುಸಾರ ಪಾಲನೆ ಮಾಡುವುದರ ಮೂಲಕ
ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ವರ್ತಕರಿಗೆ ಸೂಚಿಸಿದರು.

Contact Your\'s Advertisement; 9902492681

ಅವರು ನಗರಸಭೆಯ ಸಭಾಂಗಣದಲ್ಲಿ ಗುರುವಾರ ತಾಲೂಕಾಢಳಿತದ ವತಿಯಿಂದ ಆಯೋಜಿಸಲಾದ ವ್ಯಾಪಾರಸ್ಥರಿಗೆ ಕರೆಯಲಾದ ಸಭೆಯಲ್ಲಿ ಮಾತನಾಡಿದರು.
ಕೋವಿಡ್ 19 ಹರಡದಂತೆ ಮತ್ತು ವ್ಯಾಪಾರಸ್ಥರ ಒಪ್ಪಿಗೆಯ ಮೇರೆಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗುವುದು. ತಮ್ಮ ಅಂಗಡಿಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸುವುದು ಅಂಗಡಿ ಮಾಲೀಕರ ಕರ್ತವ್ಯ. ಸ್ಯಾನಿಟೈಜರ್ ಮತ್ತು ಹ್ಯಾಂಡ್ ವಾಶ್‍ಗಳನ್ನು ಕಟ್ಟುನಿಟ್ಟಾಗಿ ಅಂಗಡಿಗಳಲ್ಲಿ ಇಡಬೇಕು.ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಲೇಬೇಕು.

ಅಲ್ಲದೇ ಚಹಾ ಅಂಗಡಿ, ಪಾನ್‍ಶಾಪ, ಮಾಂಸದ ಅಂಗಡಿಗಳನ್ನು ತೆರೆಯುವಂತಿಲ್ಲ. ಕಿರಾಣಾ ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳನ್ನು ಮಾತ್ರ ಮಾರಾಟ ಮಾಡಬೇಕು. ಅದನ್ನು ಬಿಟ್ಟು ಗುಟಕಾ,ಸಿಗರೇಟ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.ಹೋಟೆಲದವರು ಪಾರ್ಸಲ್ ಮಾತ್ರ ನೀಡಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೇ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬೇರೆ ರಾಜ್ಯದಿಂದ,ಜಿಲ್ಲೆಯಿಂದ ಯಾರಾದರೂ ಬಂದರೆ ತಕ್ಷಣವೇ ತಾಲೂಕಾಡಳಿತಕ್ಕೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಅಭಿನಂದನೆ ಸಲ್ಲಿಸಿದ ತಹಸೀಲ್ದಾರ : ಸರ್ಕಾರದ ಆದೇಶಕ್ಕೆ ನಾವು ಬದ್ಧರಾಗಿದ್ದು ಯಾವುದೇ ಕಾರಣಕ್ಕೂ ಲಾಕ್‍ಡೌನ್ ಮುಗಿಯುವವರೆಗೆ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ಚಿನ್ನದ ಆಭರಣಗಳ ಅಂಗಡಿ ಮಾಲೀಕರು ತಹಸೀಲ್ದಾರ ಅವರಿಗೆ ತಿಳಿಸಿದಾಗ, ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ತಹಸೀಲ್ದಾರ ಸುರೇಶ ವರ್ಮಾ ಅಭಿನಂದನೆಗಳನ್ನು ಸಲ್ಲಿಸಿದರು.

ಕೋವಿಡ್ 19 ನೋಡಲ್ ಅಧಿಕಾರಿ ನೀಲಗಂಗಾ.ಎಸ್.ಬಬಲಾದ, ಪಿಐ ಅಮರೇಶ.ಬಿ, ನಗರಸಭೆಯ ಪೌರಾಯುಕ್ತ ವೆಂಕಟೇಶ, ಡಾ.ರಶೀದ್ ಮರ್ಚಂಟ್, ಅಣವೀರ ಇಂಗಿನಶೆಟ್ಟಿ, ಮೃತ್ಯುಂಜಯ್ ಹಿರೇಮಠ,ನರೇಂದ್ರ ವರ್ಮಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here