ದೇಶದ 7 ರಾಜ್ಯಗಳಲ್ಲಿ ಕೊನೆ ಹಂತದ ಮತದಾನ ಇಂದು

0
78

ನವದೆಹಲಿ: ಲೋಕಸಭೆ ಚುನಾವಣೆ 542 ಅಭ್ಯರ್ಥಿಗಳ ಆಯ್ಕೆಗೆ ಚುನಾವಣೆ ಆಯೋಗ ವಿವಿಧ ರಾಜ್ಯಗಳು ಒಳಗೊಂಡಂತೆ 7 ಹಂತದಲ್ಲಿ ಮತದಾನಕ್ಕೆ ಅಯೋಗ ಕೈಗೊಂಡಿತ್ತು, 6 ಹಂತಗಳಲ್ಲಿ ಮತದಾನ ಮುಕ್ತಾಯಗೊಂಡಿದ್ದು, ಕೊನೆ 7 ಹಂತದ ಮತದಾನ ದೇಶದ 7 ರಾಜ್ಯಗಳಲ್ಲಿ ನಡೆಯುತ್ತಿದೆ.

 

Contact Your\'s Advertisement; 9902492681

ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ. ಒಟ್ಟು 7 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 10.01 ಕೋಟಿ ಮತದಾರರು ಒಟ್ಟು 918 ಅಭ್ಯರ್ಥಿಗಳ ಹಣೆಬರಹ ಇದೇ ಮೇ 23 ರಂದು ಹೊರ ಬಿಳಲಿದೆ.

 

ಉತ್ತರ ಪ್ರದೇಶ ಹಾಗೂ ಪಂಜಾಬ್ ತಲಾ 13, ಪಶ್ಚಿಮ ಬಂಗಾಳದ 9, ಬಿಹಾರ ಹಾಗೂ ಮಧ್ಯಪ್ರದೇಶದಲ್ಲಿ ತಲಾ 8 ಕ್ಷೇತ್ರಗಳಲ್ಲಿ, ಹಿಮಾಚಲ ಪ್ರದೇಶದಲ್ಲಿ 4 ಕ್ಷೇತ್ರಗಳಲ್ಲಿ  ಜಾರ್ಖಂಡ್ 3 ಹಾಗೂ ಚಂಡೀಗಢದ 1 ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

 

ಕೊನೆಯ ಹಂತದ ಚುನಾವಣೆ ಅಖಾಡದಲ್ಲಿ ರಾಜಕೀಯ ದಿಗ್ಗಜರು ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರವಿಶಂಕರ್ ಪ್ರಸಾದ್, ರಾಜ್ಯವರ್ಧನ್ ಸಿಂಗ್ ರಾಥೋಡ್, ನಟ ಸನ್ನಿ ಡಿಯೋಲ್, ಸುಖಬೀರ್ಸಿಂಗ್ ಬಾದಲ್, ಕೇಂದ್ರ ಸಚಿವೆ ಹರಸಿಮ್ರತ್ಕೌರ್ ಬಾದಲ್​, ಬಿಜೆಪಿಯಿಂದ ಕಾಂಗ್ರೆಸ್ಗೆ ಜಂಪ್ ಆಗಿರೋ ಶತ್ರುಘ್ನ ಸಿನ್ಹಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ. ಎಲ್ಲ ನಾಯಕರ ಹಣೆಬರಹ ಇಂದು ಮತದಾನ ಪಟ್ಟಿಗೆಯಲ್ಲಿ ಸೇರಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here