ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ಧ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್ ಮುಖಂಡ ಮಜರ್ ಆಲಂ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಾ. ಬಾಬು ಜಗಜೀವನರಾಮ ಅಭಿವೃದ್ದಿ ಮತ್ತು ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಸಮಿತಿ ಮನವಿ ಸಲ್ಲಿಸಿದ್ದಾರೆ.
ಕಲಬುರಗಿ ಜಿಲ್ಲೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ನಗರದ ರೆಡ್ ಝೋನ್‌ನಲ್ಲಿರುವ ಮುಸ್ಲಿಂ ಚೌಕ್‌ಗೆ ಕೊರೋನಾ ರೋಗಕ್ಕೆ ತತ್ತರಿಸಿದ ಜನರ ಕುಂದುಕೊರತೆಗಳ ಕುರಿತು ಹಾಗೂ ಜನರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಲು ರೆಡ್ ಝೋನ್‌ನಲ್ಲಿರುವ ಮುಸ್ಲಿಂ ಚೌಕ್‌ಗೆ ಆಗಮಿಸಿ, ನೀವೆಲ್ಲರೂ ಆರೋಗ್ಯವಾಗಿ ಇದ್ದೀರಾ ಎಂದು ಸಚಿವರು ಪಕ್ಷಪಾತ ಮರೆತು ಮಾನವೀಯತೆ ದೃಷ್ಟಿಯಿಂದ ಕೇಳಿದಾಗ, ಅಲ್ಲಿ ಇದ್ದ ಕಾಂಗ್ರೆಸ್ ಮುಖಂಡ ಮಜ್‌ರ ಅಲಾಂ ಖಾನ್ ಅವರು ಆರೋಗ್ಯವಾಗಿ ಇದ್ದೀರಾ ಎಂದು ಕೇಳಿದ ಗೊವಿಂದ ಕಾರಜೋಳ ಅವರಿಗೆ, ಇನ್ನೂ ಜೀವಂತವಾಗಿ ಇದ್ದೇವೆ. ಸತ್ತಿಲ್ಲವೆರಂದು ಬಹಳ ಅಸಭ್ಯವಾಗಿ ವರ್ತಿಸಿದ್ದಾರೆ. ರಾಜಕೀಯ ಸ್ಥಾನಮಾನಕ್ಕೆ ಬೆಲೆ ಕೊಡದಿದ್ದರೂ ಪರವಾಗಿಲ್ಲ, ವಯಸ್ಸಿನಲ್ಲಿ ಹಿರಿಯರಾದಂತಹ ಕಾರಜೋಳ ಅವರಿಗೆ ಬಹಳ ಅಸಬ್ಯವಾಗಿ ವರ್ತಿಸಿ ಅಪಮಾನ ಮಾಡಿದಂತಹ ಈ ಕೃತ್ಯಕ್ಕೆ ಸಮಿತಿಯು ಖಂಡಿಸಿತ್ತದೆ ಎಂದು ಸಮಿತಿಯ ತಾಲೂಕ ಪ್ರಧಾನ ಕಾರ್ಯದರ್ಶಿ ರಾಜು. ಎಸ್.ಕಟ್ಟಿಮನಿ ಅವರು ತಿಳಿಸಿದ್ದಾರೆ.
ಮಜರ್ ಆಲಂ ಖಾನ್ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಧ್ಯಮದ ಮೂಲಕ ಕ್ಷಮೇ ಕೇಳಬೇಕು ಎಂದು ಡಾ. ಬಾಬು ಜಗಜೀವನರಾಂ ಹೋರಾಟ ಸಮಿತಿಯು ಮನವಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡ ರಾಜು.ಆರ್.ವಾಡೇಕರ್, ದಶರಥ ಎಂ.ಕಲಗುರ್ತಿ, ಬಂಡೇಶ ರತ್ನಡಗಿ, ರಾಹುಲ್ ಟಿ.ಮೇತ್ರೆ, ಸಚೀನ್ ಆರ್.ಕಟ್ಟಿಮನಿ, ಮರಲಿಂಗ ತಾರಫೈಲ್, ಚಂದಪ್ಪ ಎಲ್.ಕಟ್ಟಿಮನಿ ಇದ್ದರು.