ಕಲಬುರಗಿ: ಲಾಕ್ ಡೌನ್ ಮತ್ತು ಕೊರೋನಾ ವೈರಸ್ ರೋಗದಿಂದ ಜನರು ತತ್ತರಿಸಿ ಕಂಗಾಲಾಗಿದ್ದು, ಒಂದು ಹೊತ್ತಿಗೆ ಊಟಕ್ಕೆ ಗತಿ ಇಲ್ಲದಂತಹ ಸ್ಥಿತಿಯಲ್ಲಿ ಜನರಿದ್ದು ವಿದ್ಯುತ್ ಬಿಲ್ಲುಗಳು ಎರಡು-ಮೂರು ಪಟ್ಟು ಹೆಚ್ಚಿಗೆ ಬಂದಿದೆ, ರಾಜ್ಯ ಸರಕಾರ ಇಂತಹ ವೇಳೆಯಲ್ಲಿ ವಿದ್ಯುತ್ ಬಿಲ್ ಹೊರೆಯಾಗಿ ಪರಿಣಮಿಸಿದ್ದು, ಕೂಡಲೇ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ನಯಾ ಸವೇರಾ ಸಂಘಟನೆಯ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿ ಬಡವರಿಗೆ ಜೀವಂತವಾಗಿರಿಸಿ ಎಂದು ವಾರ್ಡ್ ನಂಬರ್ 20 ರಲ್ಲಿ ಜಿದ್ದಾ ಕಾಲೋನಿಯಲ್ಲಿ ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ನಯಾ ಸವೇರ ಸಂಘಟನೆಯಿಂದ ಸುಮಾರು ಇಪ್ಪತ್ತೈದು ಮೂವತ್ತು ಮನೆಗಳಿಗೆ ಹೋಗಿ ವಿದ್ಯುತ್ ಬಿಲ್ಲನ್ನು ಪರಿಶೀಲನೆ ಮಾಡಿದಾಗ ಈ ಸನ್ನಿವೇಶ ಬೆಳಕಿಗೆ ಬಂದಿದೆ ಎಂದು ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಅವರು ತಿಳಿಸಿದ್ದಾರೆ.
ಈ ಕುರಿತು ಬಡವಾಣೆಯ ನಿವಾಸಿಗಳು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಮುಖಂಡರಾದ ಅಲ್ಲಂಪ್ರಭು ಪಾಟೀಲ್ ಅವರ ಎದುರುಗಡೆ ತಮ್ಮ ಅಳಲು ತೋಡಿಕೊಂಡಿದರು.
ಈ ಸಂದರ್ಭದಲ್ಲಿ ಸಲೀಂ ಅಹ್ಮದ್ ಚಿತಾಪುರಿ, ಸೈರಾ ಬಾನು, ಅಬ್ದುಲ್ ವಾಹಿದ್, ಬಾಬಾ ಪಟೇಲ್ ಸರಡಗಿ ಸೇರಿದಂತೆ ಮುಂತಾದವರು ಇದ್ದರು.