ಮೇ 23 ರಿಂದ 31ರವರೆಗೆ ಎಲ್ಲ ವಾರ್ಡ್‍ಗಳಲ್ಲಿ ಹೈಡ್ರೋಕ್ಲೋರೈಡ್ ಸಲ್ಯೂಷನ್ಸ್ ಸಿಂಪರಣೆ

0
20

ಕಲಬುರಗಿ: ಜಿಲ್ಲೆಯಾದ್ಯಂತ ಕೋರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಕೋರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ 2020ರ ಮೇ 23 ರಿಂದ 31ರವರೆಗೆ ನಗರದ ಎಲ್ಲಾ 55 ವಾರ್ಡ್‍ಗಳ ಬಡಾವಣೆಗಳಲ್ಲಿ ಪ್ರತ್ಯೇಕ ವಾಹನಗಳ ಮೂಲಕ ಹೈಡ್ರೋಕ್ಲೋರೈಡ್ ಸಲ್ಯೂಷನ್ ಮತ್ತು ಸ್ಯಾನಿಟೈಜರ್ ಸ್ಪ್ರೇಯಿಂಗ್ ಮಾಡಲಾಗುತ್ತಿದ್ದು, ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ತಿಳಿಸಿದ್ದಾರೆ.

ಇದಕ್ಕಾಗಿ ನಗರದ ಎಲ್ಲ ವಾರ್ಡ್‍ಗಳಿಗೆ ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಲಾಗಿದೆ. ನಗರದ ಎಲ್ಲ 55 ವಾರ್ಡಗಳಲ್ಲಿ ಪ್ರತ್ಯೇಕ ವಾಹನಗಳ ಮೂಲಕ ಸ್ಪ್ರೇ ಮಾಡಲಾಗುತ್ತದೆ. ಕಂಟೇನ್ಮೆಂಟ್ ಝೋನ್‍ಗಳಿಗೆ ಎರಡು ಸ್ಯಾನಿಟೈಜರ್ ವಾಹನಗಳನ್ನು ಕಾಯ್ದಿರಿಸಲಾಗಿದೆ.

Contact Your\'s Advertisement; 9902492681

ಮೇ 23 ರಂದು ವಾರ್ಡ್ ಸಂಖ್ಯೆ 1 ರಿಂದ 18 ರವರೆಗೆ, ಮೇ 24 ರಂದು ವಾರ್ಡ್ ಸಂಖ್ಯೆ 19 ರಿಂದ 36 ರವರೆಗೆ ಹಾಗೂ ಮೇ 25 ರಂದು ವಾರ್ಡ್ ಸಂಖ್ಯೆ 37 ರಿಂದ 55 ರವರೆಗೆ, ಮೇ 26 ರಂದು ವಾರ್ಡ್ ಸಂಖ್ಯೆ 1 ರಿಂದ 18 ರವರೆಗೆ, ಮೇ 27 ರಂದು ವಾರ್ಡ್ ಸಂಖ್ಯೆ 19 ರಿಂದ 36 ರವರೆಗೆ ಹಾಗೂ ಮೇ 28 ರಂದು ವಾರ್ಡ ಸಂಖ್ಯೆ 37 ರಿಂದ 55 ರವರೆಗೆ ಹಾಗೂ ಮೇ 29 ರಂದು ವಾರ್ಡ್ ಸಂಖ್ಯೆ 1 ರಿಂದ 18 ರವರೆಗೆ, ಮೇ 30 ರಂದು ವಾರ್ಡ್ ಸಂಖ್ಯೆ 19 ರಿಂದ 36 ರವರೆಗೆ ಹಾಗೂ ಮೇ 31 ರಂದು ವಾರ್ಡ್ ಸಂಖ್ಯೆ 37 ರಿಂದ 55 ರವರೆಗಿನ ವಾರ್ಡುಗಳಲ್ಲಿ ಹೈಡ್ರೋಕ್ಲೋರೈಡ್ ಸಲ್ಯೂಷನ್ ಮತ್ತು ಸ್ಯಾನಿಟೈಜರ್ ಸ್ಪ್ರೇಯಿಂಗ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here