ಸ್ವಯಂ ಪ್ರೇರಿತ ರ್ಯಾಂಡಮ್ ಪರೀಕ್ಷೆಗೆ ಮುಂದಾದ ಜನರ ನೇರವಿಗೆ ಡಾ. ಚುಲಬುಲ್ ಆಗ್ರಹ

0
22

ಕಲಬುರಗಿ: ನಗರದ ಮೋಮಿನ್ ಪುರ ಬಡಾವಣೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವಾಗಿ ರ್ಯಾಂಡಮ್ ಟೆಸ್ಟ್ ಮಾಡಿಸಿಕೊಳ್ಳುತ್ತಿರುವ ಕುಟುಂಬಗಳಿಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ಸೌಕರ್ಯ ನೀಡಬೇಕೆಂದು ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷರಾದ ಡಾ.ಅಜಗರ್ ಚುಲಬುಲ್ ಅವರು ಆಗ್ರಹಿಸಿದ್ದಾರೆ.

ಇಂದು ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ಪಾಂಡೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಬ್ದುಲ್ ಜಬ್ಬಾರ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 15,16,24,25,26, ಮತ್ತು 27 ವಾರ್ಡಗಳ ಕಂಟೋನಮೆಂಟ್ ಝೋನ್ ಬಡವಾಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಡಾ. ಚುಲಬುಲ್, ಪರೀಕ್ಷೆ ಒಳಪಟ್ಟಿರುವ ಪ್ರದೇಶದಲ್ಲಿ ಆಟೋ ಚಾಲಕರು, ಟೇಲರ್ಸ್, ತರಕಾರಿ ವ್ಯಾಪಾರಿ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರದಲ್ಲಿ ತೊಡಿಗಿಸಿಕೊಂಡ ಕುಟುಂಬಗಳು ವಾಸಿಸುತ್ತಿದ್ದು, ಈ ಜನರು ಲಾಕ್ ಡೌನ್ ದಿಂದಾಗಿ ತಿನ್ನಲು ಸೂಕ್ತ ಊಟದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಜಿಲ್ಲಾಡಳಿತ ಸದರಿ ಬಡಾವಣೆಯಲ್ಲಿ ಅಗತ್ಯ ವಸ್ತುಗಳಾದ ಪಡಿತರ ಧಾನ್ಯ ಮತ್ತು ಇತರೆ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಈಗಾಗಲೇ 28 ದಿನಗಳ ಕಾಲ ಕಂಟೋನಮೆಂಟ್ ಮುಗಿದಿರುವ ವಲಯವನ್ನು ಪಾಲಿಕೆ ಮತ್ತು ಆರೋಗ್ಯ ಇಲಾಖೆ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪಾಲಿಕೆ ಆಯುಕ್ತರಾದ ರಾಹುಲ್ ಪಾಂಡೆ ಮಾತನಾಡಿ, ಶೀಘ್ರದಲ್ಲಿ ಕಂಟೋನಮೆಂಟ್ ಝೋನ್ ನಲ್ಲಿರುವ ಎಲ್ಲ ಬಡವರ ಪಟ್ಟಿಯನ್ನು ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು 28 ದಿನಗಳ ಮುಗಿದ ಕಂಟೋನಮೆಂಟ್ ಝೋನ್ ತೆರೆಗೊಳಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಾ. ಚುಲಬುಲ್ ಅವರಿಗೆ ಆಶ್ವಾಸನೆ ನೀಡಿದರು.

ತಪಾಸಣೆ ಒಳಪಟ್ಟ ಜನರು ಆತಂಕದಲ್ಲಿ ಇದ್ದು, ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿರುವ ಕಂಟೋನಮೆಂಟ್ ಝೋನ್ ಪಟ್ಟಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಅಬ್ದುಲ್ ಜಬ್ಬಾರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಅಸ್ಲಂ ಬಾಷಾ, ಶಕೀಲ್ ಅಂಗಡಿ, ಪಿ.ಎಸ್.ಐ ವಾಹೇದ್ ಅಲಿ ಕೋತ್ವಾಲ್, ಅಬ್ದುಲ್ ರಹೀಮ್ ಮಿರ್ಚಿ, ಹಾರೂನ್ ಜರ್ದಿ, ಆಲಂದಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here