ಕೊರೊನ್ ವೈರಸ್ ದೂರವಾಗಲು,ಗುಡ್ಡದ ದೇವಸ್ಥಾನದಲ್ಲಿ ಮೌನ ಅನುಷ್ಠಾನ

0
34

ಚಿತ್ತಾಪುರ: ಮಹಾಮಾರಿ ಕೊರೊನ್ ವೈರಸ್ ಇಡೀ ದೇಶವನ್ನೇ ವ್ಯಾಪಿಸಿದ್ದು ಕೊರೊನ್ ವೈರಸ್ ಇಡೀ ದೇಶದಿಂದ ದೂರವಾಗಿ ಮಾನವನ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಜೀವನ ನಡೆಸುವಂತಾಗಲಿ ಎಂಬ ಉದ್ದೇಶದಿಂದ ದಂಡಗುಂಡು ಭೀಮನ ಗುಡ್ಡದ ಮಹಾಸ್ವಾಮಿಗಳು ಮೌನ ಅನುಷ್ಠಾನ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕಿನ ದಂಡಗುಂಡ ಗ್ರಾಮದ ಭೀಮನ್ ಗುಡ್ಡದ ಮಹಾಸ್ವಾಮಿಗಳು ಮಾತನಾಡಿ ಕೊರೊನ್ ವೈರಸ್ ದೂರವಾಗುವ ಉದ್ದೇಶದಿಂದ ಭೀಮಲಿಂಗೇಶ್ವರ ಗುಡಿಯಲ್ಲಿ ಮೇ,17 ರಿಂದ 41 ದಿನಗಳ ಕಾಲ ಮೌನ ಅನುಷ್ಠಾನ ಕೈಗೊಳ್ಳಲಾಗಿದೆ.

Contact Your\'s Advertisement; 9902492681

ಮಧ್ಯರಾತ್ರಿ ಎದ್ದು ಸ್ನಾನ ಮತ್ತು ಪ್ರತಿನಿತ್ಯದ ಕ್ರಿಯಾವಿಧಿಗಳನ್ನು ಪೂರೈಸಿದ ನಂತರ ವಿವಿಧ ಧಾರ್ಮಿಕ ಪೂಜಾ ವಿಧಿ,ವಿಧಾನಗಳನ್ನು ನಡೆಸಿ ಊಟ ತ್ಯಾಜಿಸಿ ಒಂದು ಹೊತ್ತು ಹತ್ತಿ ಹಣ್ಣು ಸೇವನೆ ಮೂಲಕ ಮೌನ ಅನುಷ್ಠಾನ ಮುಂದುವರಿಸಿದ್ದಾರೆ.

ಜಗತ್ತಿನಲ್ಲಿನ ಎಲ್ಲರೂ ವಿಭೂತಿಯನ್ನು ಧರಿಸಬೇಕು, ಹಾಗೂ ಮಾತೆಯರು ಒಂದು ರೂಪಾಯಿ ಅಷ್ಟು ಗಂಡಕ್ಕು ಹಣೆಯ ಮೇಲೆ ಕುಂಕುಮ ಹಚ್ಚಬೇಕು ಇದಕ್ಕೆ ಅಂಜಿ ಕೊರೊನ್ ಓಡಿ ಹೋಗುತ್ತದೆ ಎಂದರು,ಈ ಹಿಂದೆ ಹಲವು ಅನುಷ್ಠಾನ ಕೈಗೊಂಡಿರುವ ಮಹಾಸ್ವಾಮಿಗಳು ಕೊರೊನ್ ವೈರಸ್ ಇಡೀ ಜಗತ್ತಿನಿಂದ ದೂರವಾಗಿಸುವ ಸಲುವಾಗಿ ದೇವರ ಮೋರೆ ಹೋಗುವುದೊಂದೇ ಬಾಕಿ ಇತ್ತು, ಕೊರೊನ್ ವೈರಸ್ ದೂರವಾಗುತ್ತದೆ ಎಂಬ ನಿಚ್ಚಳ ನಂಬಿಕೆಯಿಂದ ನಾನು ಮೌನ ಅನುಷ್ಠಾನ ಮಾಡಲು ನಿರ್ಧರಿಸಿದ್ದೇನೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here