ಕಲಬುರಗಿ: ಸೋಮವಾರದ ಸಂಜೆ ಬುಲೆಟಿನ್ ಪ್ರಕಟವಾಗಿದ್ದು, ಜಿಲ್ಲೆಗೆ ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದವರ ಪೈಕಿ ಮತ್ತೆ 5 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಇದರಿಂದ ಸೋಮವಾರ ಒಟ್ಟಾರೆ 10 ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 114ಕ್ಕೆ ಏರಿದೆ.
ಸಾಯಂಕಾಲ ಸೋಂಕು ಕಂಡುಬಂದ 5 ಜನ ರೋಗಿಗಳ ವಿವರ ಇಂತಿದೆ: ಮುಂಬೈ ಪ್ರವಾಸ ಹಿನ್ನೆಲೆಯ ಕಲಬುರಗಿ ತಾಲೂಕಿನ ಆಲಗೂಡ ಗ್ರಾಮದ 4 ವರ್ಷದ ಹೆಣ್ಣು ಮಗು (ರೋಗಿ ಸಂಖ್ಯೆ-1242) ಮತ್ತು ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಸಂಗಾಪುರ ತಾಂಡಾ ಮೂಲದ 6 ವರ್ಷದ ಹೆಣ್ಣು ಮಗು (ರೋಗಿ ಸಂಖ್ಯೆ-1243) ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಇನ್ನೂ ಪುಣೆ ಪ್ರವಾಸ ಹಿನ್ನೆಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಜಿಲ್ ವರ್ಶಾ ಗ್ರಾಮದ 4 ವರ್ಷದ ಗಂಡು ಮಗು (ರೋಗಿ ಸಂಖ್ಯೆ-1244), 5 ವರ್ಷದ ಹೆಣ್ಣು ಮಗು (ರೋಗಿ ಸಂಖ್ಯೆ-1245) ಹಾಗೂ 25 ವರ್ಷದ ಯುವತಿ (ರೋಗಿ ಸಂಖ್ಯೆ-1246) ಕೊರೋನಾ ಸೋಂಕು ದೃಢವಾಗಿದೆ.
ಮುಂಬೈ ಮತ್ತು ಪುಣೆ ಪ್ರವಾಸ ಹಿನ್ನೆಲೆಯ ಎಲ್ಲಾ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಸೆಂಟರ್‌ನಿಂದ ಕೋವಿಡ್-19 ಆಸ್ಪತ್ರೆಗೆ ಈಗಾಗಲೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಡು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.