ಔಷಧಿ ಖರೀದಿಸುವ ಸಾರ್ವಜನಿಕರ ವಿವರವನ್ನು ಪ್ರತಿದಿನ ಕಡ್ಡಾಯವಾಗಿ ವೆಬ್‍ಸೈಟ್‍ನಲ್ಲಿ ಸಲ್ಲಿಸಿ

0
130

ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಮಹಾಮಾರಿ ರೋಗ ಹರಡುತ್ತಿರುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ಸಾರ್ವಜನಿಕರು ಔಷಧಿ ಅಂಗಡಿಗಳಿಂದ ಂ Antibiotics, Antipyretics and Anti Fever ಮಾತ್ರೆ/ ಔಷಧಿಗಳನ್ನು ಖರೀದಿಸುವ ವಿವರಗಳನ್ನು ಕಲಬುರಗಿ ಜಿಲ್ಲೆಯ ಎಲ್ಲ ಔಷಧಿ ಅಂಗಡಿಗಳ ಮಾಲೀಕರು ಪ್ರತಿದಿನ ಕಡ್ಡಾಯವಾಗಿ ಸಂಜೆ 4 ಗಂಟೆಯೊಳಗಾಗಿ ವೆಬ್‍ಸೈಟ್‍ನಲ್ಲಿ ವಿವರಗಳನ್ನು ಸಲ್ಲಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಡಾ. ಶರತ್ ಬಿ. ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಔಷಧಿ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಪ್ರತಿದಿನ https://pharma.karnataka.tech/index.php.admin.login ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ವಿವರ ಸಲ್ಲಿಸಬೇಕು. ಪ್ರತ್ಯೇಕ ಔಷಧಿ ಅಂಗಡಿಗಳ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್‍ಗಾಗಿ ಕಲಬುರಗಿಯ ಸಹಾಯಕ ಔಷಧ ನಿಯಂತ್ರಕರುಗಳಾದ ಗೋಪಾಲರಾವ್ ಇವರ ಮೊಬೈಲ್ ಸಂಖ್ಯೆ 9845266637 ಹಾಗೂ ಕರುಣಾದೇವಿ ಇವರ ಮೊಬೈಲ್ ಸಂಖ್ಯೆ 9741694484 ಗಳಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here