ಚಡಕಲಗುಡ್ಡ ಗ್ರಾಮಕ್ಕೆ ಮೂಲಭೂತ ಸೌಕರ್ಯಕ್ಕೆ KPRS ಅಗ್ರಹ

0
38

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಡಕಲಗುಡ್ಡ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ NREG ಕೆಲಸ ಸೇರಿ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ (KPRS) ದೇವದುರ್ಗ ತಾಲೂಕು ಸಮಿತಿಯು ವತಿಯಿಂದ ಮನವಿ ಸಲ್ಲಿಸಲಾಯಿತು.

ಚಡಕಲಗುಡ್ಡ ಗ್ರಾಮದಲ್ಲಿ ಸುಮಾರು 300 ಹೆಚ್ಚು ಕುಟುಂಬಗಳ ಎರಡು ಸಾವಿರಕ್ಕೂ ಜನರು ವಾಸ ಮಾಡುತಿದ್ದಾರೆ. ಆದರೆ ಈ ಗ್ರಾಮದ ಜನತೆಗೆ ಬೇಕಾದ ಆಗತ್ಯ ಮೂಲಭೂತ ಸೌಕರ್ಯಗಳು ಇಲ್ಲವಾಗಿವೆ. ಕುಡಿಯುವ ನೀರಿನ ಸಮಸ್ಯೆ, ಸಮರ್ಪಕ ವಿದ್ಯುತ್ ಪೂರೈಕೆ, ಸೂಕ್ತ ಚರಂಡಿ,ರಸ್ತೆ, ಉದ್ಯೋಗ ಖಾತ್ರಿಯ ಕೆಲಸ ಇಂತಹ ಹಲವು ಸಮಸ್ಯೆಗಳಿಂದ ಈ ಗ್ರಾಮದ ಜನ ಬಳಲುತ್ತಿದ್ದಾರೆ. ಊರಿನ ಹೊರ ಭಾಗದಲ್ಲಿ ಕಸನದೊಡ್ಡಿಗೆ ಹೋಗುವ ದಾರಿಯಲ್ಲಿ ಇರುವ ಎರಡು ಬೊರವೇಲ್ ಕೆಟ್ಟು ಹೋಗಿದೆ ಮತ್ತು ಸಮರ್ಪಕ ಚರಂಡಿ ಇಲ್ಲದ ಪರಿಣಾಮ ಅದೇ ರಸ್ತೆಯಲ್ಲೆ ಗ್ರಾಮದ ನೀರು ಹರಿದು ಜನತೆಗೆ ಓಡಾಡಲು ತೊಂದರೆ ಆಗುತ್ತಿದೆ, ಅದೇ ಮಾರ್ಗದಲ್ಲಿ ಇರುವ ದನಗಳ ಕುಡಿಯುವ ನೀರಿಗಾಗಿ ಇರುವ ತೊಟ್ಟಿ ಉಪಯೋಗಕ್ಕೆ ಇಲ್ಲದಾಗಿದೆ. ಈ ರೀತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಗ್ರಾಮದ ಜನತೆಯು ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಈ ಲಾಕ್ ಡೌನ್ ಸಂಕಷ್ಟದ ಮತ್ತು ಬೇಸಿಗೆಯ ದಿನಗಳಲ್ಲಿ ಜನತೆಯು ಈ ಮೇಲಿನ ಹಲವು ಸಮಸ್ಯೆಗಳಿಗೆ ಸಿಲುಕಿ ಗಂಭೀರವಾದ ಪರಿಸ್ಥಿತಿ ಯಲ್ಲಿ ಮೂಕ ಪ್ರಾಣಿಗಳಂತೆ ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಈ ಕೂಡಲೇ ತಾವು ಎಚ್ಚೆತ್ತುಕೊಂಡು ಆಗತ್ಯ ಬೇಡಿಕೆಗಳಾದ ಕುಡಿಯುವ ನೀರು, ಬೊರೆವೇಲ್ ರಿಪೇರಿ, ದನದ ಕುಡಿಯುವ ನೀರಿನ ತೊಟ್ಟಿಯ ಸರಿಯಾದ ನಿರ್ವಹಣೆ, ಚರಂಡಿಯ ಸ್ವಚ್ಚತೆ, ಸಮರ್ಪಕವಾದ ವಿದ್ಯುತ್ ಪೂರೈಕೆ, ರಸ್ತೆ ಸೇರಿ ಇತರ ಆಗತ್ಯ ನಾಗರಿಕ ಸೌಕರ್ಯಗಳನ್ನು ನೀಡಬೇಕು ವಾರದೊಳಗೆ ಸಮಸ್ಯೆಗಳು ಬಗೆಹರಿಸದೆ ನಿರ್ಲಕ್ಷ್ಯ ತೋರಿದಲ್ಲಿ ಆ ಊರಿನ ಜನತೆಯೊಂದಿಗೆ ಜೊತೆಗೂಡಿ KPRS, (ಕರ್ನಾಟಕ ಪ್ರಾಂತ್ಯ ರೈತ ಸಂಘ) DYFI ( ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ) ಸಂಘಟನೆಯ ವತಿಯಿಂದ ಹೋರಾಟ ಮಾಡಲಾಗುವುದೆಂದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದ ಎಚ್ಚರಿಸಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರಾದ ನರಸಣ್ಣ‌ ನಾಯಕ, ಕಾರ್ಯದರ್ಶಿ ಹನುಮಂತ ಮಂಡಲಗುಡ್ಡ, ಮುಖಂಡರಾದ ಹನುಮಂತ, ಶಬ್ಬೀರ್ ಜಾಲಹಳ್ಳಿ, ಮುಕ್ತುಂಪಾಷ, ಶಿವರಾಜ ವಠಾರ, ಮಹಾಲಿಂಗ ದೊಡ್ಡಮನಿ, ಗ್ರಾಮದ ಮುಖಂಡರಾದ ‌ಮುತ್ತಣ್ಣ, ಬಸವರಾಜ ಚಡಕಲಗುಡ್ಡ, ಅಂಬ್ರೇಶ ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here