ಎನ್‍ಇಪಿ ನೀತಿ ಕೈಬಿಡದಿದ್ದರೆ ಹೋರಾಟ: ಎಚ್ಚರಿಕೆ

0
47

ವಾಡಿ: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ-2019) ಹಾಗೂ ಆನ್‍ಲೈನ್ ಶಿಕ್ಷಣ ಬೋಧನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕೂಡಲೇ ಇದನ್ನು ಕೈಬಿಡಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ) ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ ಒತ್ತಾಯಿಸಿದರು.

ಎನ್‍ಇಪಿ-2019 ಅನುಷ್ಠಾನ ಹಾಗೂ ಆನ್‍ಲೈನ್ ಶಿಕ್ಷಣ ಬೋಧನೆ ಪದ್ಧತಿಯನ್ನು ವಿರೋಧಿಸಿ ಶನಿವಾರ ಪಟ್ಟಣದ ಶಿಕ್ಷಣ ಉಳಿಸಿ ಸಮಿತಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಆನ್‍ಲೈನ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದ ಎಷ್ಟು ಜನ ಬಡ ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಕೊಡಿಸಲು ಸಾಮಥ್ರ್ಯವಿದೆ? ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಂಪರ್ಕ ಎಷ್ಟು ಸಮರ್ಪಕವಾಗಿದೆ? ಗೂಗಲ್ ಬಳಕೆ ಮತ್ತು ಸ್ಮಾರ್ಟ್ ಫೋನ್ ಖರೀದಿಸಲು ಎಷ್ಟು ಜನ ತಂದೆ ತಾಯಿಯಂದಿರಿಗೆ ಸಾಧ್ಯವಿದೆ? ಎಂಬುದನ್ನು ಪರಿಗಣಿಸದ ಸರಕಾರ, ಏಕಾಏಕಿ ಇಂಥಹ ಜನವಿರೋಧಿ ಹೊಸ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದೆ. ಆನ್‍ಲೈನ್ ಪಾಠದ ಮೂಲಕ ಸಾವಿರಾರು ಶಿಕ್ಷಕರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ ಎಂದು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

Contact Your\'s Advertisement; 9902492681

ಶಿಕ್ಷಣ ಎಂಬುದು ಪ್ರತಿಯೊಬ್ಬರಿಗೂ ತಲುಪಬೇಕಾದ ಮಾಧ್ಯಮ. ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಮನುಷ್ಯನಿಗೆ ಮೂಕ್ಯವಾಗಿ ಬೇಕಿರೋದು ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗ. ಇದರ ಬದಲಾಗಿ ಮನುಕುಲಕ್ಕೆ ಬೇಕಾದ ಜ್ಞಾನದ ದಾರಿ ದೀಪವನ್ನ ತಪ್ಪಿಸಲು ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದೆ. ಈ ಆನ್‍ಲೈನ್ ಶಿಕ್ಷಣ ವ್ಯವಸ್ಥೆಯನ್ನು ದೇಶದಾಧ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಶಿಕ್ಷಕ ಸಮುದಾಯ ಇದರ ವಿರುದ್ಧ ತಿರುಗಿ ಬಿದ್ದಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ತಿಂಗಳ ಅಂತ್ಯದ ವೇಳೆಗೆ ಎನ್‍ಇಪಿ-2019 ಅನ್ನು ಜಾರಿಗೆ ತರಲು ಮುಂದಾಗಿದೆ. ಇದರ ವಿರುದ್ಧ ಜನತೆ ನಿರಂತರವಾಗಿ ಆನ್‍ಲೈನ್ ಚಳುವಳಿ ನಡೆಸಲು ಮುಂದಾಗಬೇಕು. ಸಂದರ್ಭ ಬಂದರೆ ಉನ್ನತ ಮಟ್ಟದ ಹೋರಾಟಕ್ಕೂ ಸಿದ್ಧರಿರಬೇಕು ಎಂದು ಕರೆ ನೀಡಿದರು.

ಶಿಕ್ಷಣ ಉಳಿಸಿ ಸಮಿತಿಯ ನಗರ ಘಟಕದ ಸಂಚಾಲಕ ರಮೇಶ ಮಾಶಾಳ, ಶಿಕ್ಷಕರಾದ ಶ್ರೀಶರಣ ಹೊಸಮನಿ, ಪದ್ಮರೇಖಾ ವೀರಭದ್ರಪ್ಪ, ಪ್ರಕಾಶ ಹಾಗೂ ಯೇಸಪ್ಪ ಕೇದಾರ ಅವರು ಆನ್‍ಲೈನ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆಯಂತಿರುವ ಹಾಗೂ ಶಿಕ್ಷಣದ ಮೂಲಭೂತ ಅಡಿಪಾಯಕ್ಕೆ ಧಕ್ಕೆ ತರುವ ಎನ್‍ಇಪಿ-2019ರ ಅನುಷ್ಠಾನವನ್ನು ಕೂಡಲೇ ಕೈಬಿಡಬೇಕು. ಬಡ ವಿದ್ಯಾರ್ಥಿಗಳ ವಿರೋಧಿಯಾದ ಹಾಗೂ ತಾರತಮ್ಯವನ್ನುಂಟು ಮಾಡುವ ಆನ್‍ಲೈನ್ ಶಿಕ್ಷಣದ ಬೋಧನೆ ಮತ್ತು ಪರೀಕ್ಷೆ ನಡೆಸುವ ವಿಧಾನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here