ನರಸಿಂಹ ಜಯಂತಿ ರಥೋತ್ಸವ

0
93

ಸುರಪುರ: ನಗರದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ನರಸಿಂಹದೇವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಆಗಿ ಹುಣ್ಣಿಮೆ ಶನಿವಾರದಂದು ನರಸಿಂಹದೇವರ ಜಯಂತಿ ಪ್ರಯುಕ್ತ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.

ಜಯಂತಿ ಪ್ರಯುಕ್ತ ಒಂಭತ್ತು ದಿನಗಳವರೆಗೆ ಪ್ರತಿನಿತ್ಯ ವಿವಿಧ ವಾಹನಗಳ ಸೇವೆ ನಡೆದವು, ಶನಿವಾರದಂದು ನಡೆದ ರಥೋತ್ಸವದಲ್ಲಿ ರಥವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು, ಲಕ್ಷ್ಮೀ ಸಹಿತ ನರಸಿಂಹ ದೇವರ ಮೂರ್ತಿಯನ್ನು ರಥದಲ್ಲಿ ಕೂಡಿಸಿ ಭಜನೆ ಮೂಲಕ ಭಕ್ತಾದಿಗಳು ಸಂಭ್ರಮದಿಂದ ರಥವನ್ನು ಎಳೆದರು, ರಥಕ್ಕೆ ಹೂ, ಹಣ್ಣುಗಳನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸಚಾರ್ಯ ಗುಡಿ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು, ಪಂಡಿತರಾದ ನಾರಾಯಣಾಚಾರ್ಯ ಐಜಿ ಅವರು ಒಂಭತ್ತು ದಿನಗಳವರೆಗೆ ನರಸಿಂಹದೇವರ ಅವತಾರ ಕಥಾ ಭಾಗವಾದ ಭಾಗವತ ಸಪ್ತಮ ಸ್ಕಂದ ಪುರಾಣವನ್ನು ನಡೆಸಿಕೊಟ್ಟರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ನಗರದ ಪ್ರತಿನಿಧಿ ವೆಂಕಟರಮಣ ದೇವಸ್ಥಾನದಲ್ಲಿನ ಪುಷ್ಕರಣಿಯನ್ನು ಸ್ವಚ್ಛಗೊಳಿಸುವ ಶ್ರಮ ಅಭಿಯಾನ ಕೈಗೊಂಡ ವಿಶ್ವ ಹಿಂದೂ ಪರಿಷತ್, ಹರೇ ವಿಠಲ್ ಸಮಿತಿ ಹಾಗೂ ಓಣಿಯ ಯುವಕರನ್ನು ಹೈಕೋರ್ಟ ನ್ಯಾಯಾಧೀಶರಾದ ಪಿ.ಎಸ್.ದಿನೇಶಕುಮಾರ ಅವರು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಬಿ.ಆರ್.ಜಾಗೀರದಾರ, ಹೈಕೋರ್ಟ ನ್ಯಾಯಾಧೀಶರಾದ ಪಿ.ಎಸ್.ದಿನೇಶಕುಮಾರ, ಭಗವಂತರಾವ ಕುಲಕರ್ಣಿ ಲಕ್ಷ್ಮೀಪುರ, ನರಸಿಂಹಮೂರ್ತಿ ಡಬೀರ, ಶ್ರೀಧರಾಚಾರ್ಯ ಬೂದೂರ, ರಾಘವೇಂದ್ರರಾವ ಕುಲಕರ್ಣಿ ಬಾಡಿಯಾಲ, ವಿ.ಎಸ್.ಜೋಷಿ ವಕೀಲರು, ಸೀತಾರಾಮಾಚಾರ್ಯ ಐಜಿ, ಗುರುರಾಜ ಪಾಲ್ಮೂರ, ಮಧುಸೂದನ ಡಬೀರ, ನರಸಿಂಹರಾವ ಬಾಡಿಯಾಲ, ನಾಗರಾಜ ಪಾಲ್ಮೂರ, ವೆಂಕಟೇಶ ಭಕ್ರಿ, ನರಸಿಂಹ ಭಂಡಿ, ಓಂಕಾರ ಜೋಷಿ, ಕಲ್ಯಾಣರಾವ ಕೋಠಿಖಾನಿ, ಕೇಶವ ಗುಡಿ, ಶ್ರೀನಿವಾಸ ಪ್ರತಿನಿಧಿ ಹಾಗೂ ಮಹಿಳೆಯರು ವಿವಿಧ ಕಡೆಗಳಿಂದ   ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ನಗರದ ಪ್ರತಿನಿಧಿ ವೆಂಕಟರಮಣ ದೇವಸ್ಥಾನದಲ್ಲಿನ ಪುಷ್ಕರಣಿಯನ್ನು ಸ್ವಚ್ಛಗೊಳಿಸುವ ಶ್ರಮ ಅಭಿಯಾನ ಕೈಗೊಂಡ ವಿಶ್ವ ಹಿಂದೂ ಪರಿಷತ್, ಹರೇ ವಿಠಲ್ ಸಮಿತಿ ಹಾಗೂ ಓಣಿಯ ಯುವಕರನ್ನು ಹೈಕೋರ್ಟ ನ್ಯಾಯಾಧೀಶರಾದ ಪಿ.ಎಸ್.ದಿನೇಶಕುಮಾರ ಅವರು ಶಾಲು ಹೊದಿಸಿ ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here