ವಿದ್ಯುಚ್ಛಕ್ತಿ ಮಸೂದೆ ಅನುಷ್ಠಾನ ಖಂಡಿಸಿ ಚೆಸ್ಕಾಂ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

0
43

ನಾಗಮಂಗಲ: ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಹೊರಟಿರುವುದು ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಮಾಡುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು ಹಾಗೂ ರೈತರು ಮತ್ತು ಜನಸಾಮಾನ್ಯರಿಗೂ ಹೊರೆಯಾಗುವುದರಿಂದ.

ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಸೋಮವಾರ ದಂದು ಅಧಿಕಾರಿ/ಕೇಂದ್ರ ಸಮಿತಿಯ ಅದ್ಯಕ್ಷರು/ಕಾರ್ಯದರ್ಶಿ ಯವರು, ಆಲ್ ಇಂಡಿಯಾ ಫೆಡರೇಶನ್ ನವರು ಕರೆ ನೀಡಿರುವಂತೆ ವಿದ್ಯುಚ್ಛಕ್ತಿ ಮಸೂದೆ 2020 ರ ಅನುಷ್ಟಾನವನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಸೆಳೆಯಲು ನಾಗಮಂಗಲ ವಿಭಾಗೀಯ ಕಚೇರಿಯ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ನಡೆಸಲಾಯಿತು.

Contact Your\'s Advertisement; 9902492681

ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ಕಾರಣ ತಮ್ಮ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಎಲ್ಲಾ ನೌಕರರು ತೋಳಿಗೆ ಕಪ್ಪು ಬಣ್ಣದ ರಿಬ್ಬನ್ ಪಟ್ಡಿಯನ್ನು ಕಟ್ಟಿಕೊಂಡು ಕಚೇರಿಯ ನಿಗಮದ ಕಚೇರಿಯ ಆವರಣದಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನಾಗಮಂಗಲ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಲ್ ನಾಗರಾಜ್, ತಿಳಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ಸಮಿತಿಯ ಅಧ್ಯಕ್ಷರು ಬೀರಪ್ಪ, ಸ್ಥಳೀಯ ಸಮಿತಿ ಕಾರ್ಯದರ್ಶಿ ಎಸ್.ಜಿ ದಿಲೀಪ್ ಸಹಾಯಕ ಇಂಜಿನಿಯರ್ ನಟರಾಜು, ಕೆ. ಶಿವಕುಮಾರ್, ತಾಲೂಕು ಎಸ್ಸಿ ಎಸ್ಟಿ ಸಂಘದ ಅಧ್ಯಕ್ಷ ಶಿವಕುಮಾರ್, ರವಿಕುಮಾರ್ ಸಿಂಗ್ ಹಾಗೂ ತಾಲೂಕಿನ ಚೆಸ್ಕಾಂ ನೌಕರರು ಭಾಗವಹಿಸಿದ್ದರು.

ದೇ.ರಾ .ಜಗದೀಶ ನಾಗಮಂಗಲ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here