ಕಲಬುರಗಿ: ಕಾಡು ಬೆಳಸಿ, ನಾಡು ಉಳಿಸಿ ನಾವು ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಸಾಮಾಜಿಕವಾಗಿ ಬದುಕಬೇಕು ಎಂದು ಮುಖ್ಯಗುರುಗಳು ಹೇಳಿದರು.
1972-73 ರಿಂದ ವಿಶ್ವ ಸಂಸ್ಥೆಯ ವತಿಯಿಂದ ಪರಿಸರ ದಿನಾಚರಣೆ ಆರಂಭವಾಯಿತು. ದಿನ ನಿತ್ಯ ಪರಿಸರ ಸಂರಕ್ಷಣೆ ಎಲ್ಲರೂ ಕರ್ತವ್ಯ ಎಂದು ಪಾಲಿಸಬೇಕು ಇಂದು ಗಿಡ ನಡುವ ಮೂಲಕ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿ ಆಚರಣೆ ಮಾಡಲಾಯಿತು.
ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಮಾಡುವ ಮೂಲಕ ಪರಿಸರ ಸ್ನೇಹಿ ಜೀವನ ಪ್ರತಿಯೊಬ್ಬರೂ ಪಾಲನೆ ಪೋಷಣೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಗುರುಗಳಾದ ಮಲ್ಲಮ್ಮ, ಅನೀತಾ ರಾಠೋಡ ಸಿಬ್ಬಂದಿ ವರ್ಗದವರಾದ ರಾಜೇಶ್ವರಿ, ವಿಜಯಲಕ್ಷ್ಮಿ, ರಾಜೇಶ್ವರಿ ಜಿ, ಅನುಸುಯಾ, ಸುಜಾತಾ, ಸಂಗನಬಸವ, ಬಾಬುರಾವ ಪಾಟೀಲ ಇತರರು ಉಪಸ್ಥಿತರಿದ್ದರು.