ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಮತ್ತು ಪರಸ್ಪರ ಅಂತರ ಕಾಪಾಡಿ: ಬಿರಾದರ

0
58

ಸುರಪುರ: ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡಿದೆ.ಈ ಕರೊನಾ ಮಹಾಮಾರಿಯು ಸಮುದಾಯವಾಗಿ ಹರಡದಂತೆ ನೋಡಿಕೊಳ್ಳಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಹಶಿಲ್ದಾರ ನಿಂಗಣ್ಣ ಬಿರಾದರ ಹೇಳಿರು.

ತಾಲೂಕು ಆಡಳಿತ ಮತ್ತು ನಗರಸಭೆ, ಪೊಲೀಸ್ ಇಲಾಖೆ ವತಿಯಿಂದ ಮರ್ಷಿ ವಾಲ್ಮೀಕಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕರೊನಾ ವೈರಸ್‌ಗೆ ಇನ್ನು ಲಸಿಕೆ ಬಂದಿಲ್ಲ ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಕೆಲವು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಜಾರಿಗೆ ತಂದಿದೆ ಅದರಲ್ಲಿ ಸಾರ್ವಜನಿಕರು ಆರೋಗ್ಯದ ದೃಷ್ಠಿಯಿಂದ ಮಾಸ್ಕ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಆಗಾಗ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿ ಜನರು ಪಾಲಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ನಂತರ ಮಹರ್ಷಿ ವಾಲ್ಮೀಕಿ ವೃತ್ತದಿಂದ ನಗರದ ಪ್ರಮುಖ ರಸ್ತೆಗಳ ಮುಖಾಂತರ ಪಾದಯಾತ್ರೆ ಆರಂಭಿಸಿ ಡಾ.ಬಾಬಾ ಸಾಹೇಬ ಅಂಬೇಡ್ಕರ ವೃತ್ತದ ವರೆಗೆ ಕರೋನಾ ವೈರಸ್ ಸಾಮಾಜಿಕವಾಗಿ ಹರಡದಂತೆ ತಡೆಯಲು ಪಾಲಿಸಬೇಕಾದ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸಲಾಯಿತು ಹಾಗೂ ಮಾಸ್ಕಗಳನ್ನು ವಿತರಿಸಲಾಯಿತು.

ಡಿಎಸ್‌ಪಿ ವೆಂಕಟೇಶ ಹುಗಿಬಂಡಿ, ಪೌರಾಯುಕ್ತ ಜೀವನಕುಮಾರ, ಪಿಐ ಎಸ್.ಎಮ್.ಪಾಟೀಲ, ನಗರಸಭೆ ಸದಸ್ಯರಾದ ವೇಣುಮಾಧವ ನಾಯಕ, ಶರೀಫಸಾಬ, ಅಯ್ಯಣ್ಣ, ಬಸವರಾಜ ಕೊಡೇಕಲ್, ಅಧಿಕಾರಿಗಳಾದ ಓಂಕಾರ ಪೂಜಾರ, ಯಲ್ಲಪ್ಪ ನಾಯಕ, ಶಿವಪುತ್ರಪ್ಪ, ಜಗದೀಶ ಶಾಖನವರ್ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here