ಕಲಬುರಗಿ: ಕಾಂಗ್ರೆಸ್ ಯುವ ಮುಖಂಡರಾದ ಫರಾಜ್-ಉಲ್-ಇಸ್ಲಾಂ ಮತ್ತು ಮುಬಾಶೀರ್ ಮಹಮೂದ್ ಅವರ ಜನ್ಮದಿನವನ್ನು ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರ ನೇತೃತ್ವದಲ್ಲಿ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿ ಶುಭಕೊರಲಾಯಿತು.
ಈ ವೇಳೆಯಲ್ಲಿ ಕೊರೊನಾ ಮಹಾಮಾರಿ ಮತ್ತು ಗಡಿಯಲ್ಲಿ ಭಾರತ ಸೈನಿಕರ ವೀರ ಹುತಾತ್ಮರಾದ ಹಿನ್ನೆಯಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಫರಾಜ್-ಉಲ್-ಇಸ್ಲಾಂ ಅವರು ತಮ್ಮ ಜನ್ಮದಿನವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳುತ್ತಿದ್ದು, ಕಾರ್ಯಕರ್ತರು ಯಾವುದೇ ರೀತಿ ವಿಜ್ರಂಭಣೆ ಮಾಡಕುಡದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ವಹೀದ್ ಅಲಿ ಪಾತೇಹಕಾನಿ, ಸೈಯದ್ ಅಹ್ಮದ್ ಸಬ್, ಆದಿಲ್ ಸೇಠ್ ಸುಲೈಮಾನ್, ಮಹಮ್ಮದ್ ಮಜಹರ್ ಆಲಂ ಖಾನ್, ಸಾಜಿದ್ ಅಲಿ ರಂಜೋಲ್ವಿ, ನದೀಮ್ ಸೆರಿಕಾರ್ ಸೇರಿದಂತೆ ಮುಂತಾದವರು ಇದ್ದರು.