ಎಸ್‌ಎಸ್‌ಎಲ್‌ಸಿ ಪರೀಕ್ಷಾ ಬರೆಯುವ ವಿದ್ಯಾರ್ಥಿಗಳಿಗೆ ಒಂದು ಸಾವಿರ ಮಾಸ್ಕ್ ವಿತರಣೆ

0
54

ಶಹಾಬಾದ: ನಗರದ ಸಿಆರ್‌ಪಿ ಶಿವಪುತ್ರಪ್ಪ ಕರಣಿಕ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಬರೆಯುವ ವಿದ್ಯಾರ್ಥಿಗಳಿಗೋಸ್ಕರ ಸುಮಾರು ೧೦೦೦ ಮಾಸ್ಕಗಳನ್ನು ಸ್ಕೌಟ್ ಅಂಡ್ ಗೈಡ್ಸ್‌ಗೆ ನೀಡಿದರು.

ಸ್ಕೌಟ್ ಅಂಡ್ ಗೈಡ್ಸ್ ಅಧಿಕಾರಿ ಎಸ್.ಪಿ.ಸುಳ್ಳದ್ ಮಾತನಾಡಿ, ಕೋವಿಡ್ ೧೯ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಮಕ್ಕಳ ಸುರಕ್ಷತೆಗೆ ಮಾಸ್ಕಗಳನ್ನು ವಿತರಿಸಲು ಯೋಜನೆ ಹಾಕಿದೆ. ಸ್ಕೌಟ್ ಅಂಡ್ ಗೈಡ್ಸ್ ಮೂಲಕ ಮಕ್ಕಳಿಗೆ ಮಾಸ್ಕ್ ಒದಗಿಸಲಾಗುತ್ತಿದೆ. ಶಹಾಬಾದ ನಗರದ ಸಿಆರ್‌ಪಿ ಶಿವಪುತ್ರಪ್ಪ ಕರಣಿಕ್ ಅವರು ಇದನ್ನು ಮನಗಂಡು ಸ್ವಯಂಪ್ರೇರಿತರಾಗಿ ಮಕ್ಕಳಿಗೆ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಲು ಸುಮಾರು ೧೦೦೦ ಮಾಸ್ಕ್‌ಗಳನ್ನು ಉಚಿತವಾಗಿ ನೀಡಿದ್ದಾರೆ.ಇದೇ ರೀತಿ ಶಿಕ್ಷಣ ಇಲಾಖೆಯ ಸಿಬ್ಬಂದಿ, ಮುಖಂಡರು, ಸಾಮಾಜಿಕ ಕಾರ್ಯಕರ್ತರು ಮುಂದೇ ಬಂದರೆ ಬಹಳ ಅನುಕೂಲವಾಗುತ್ತದೆ ಎಂದರು.

Contact Your\'s Advertisement; 9902492681

ಅಧಿಕಾರಿಗಳಾದ ಸಯ್ಯಪ್ಪ ಅಂಬರಖೇಡ, ಚನ್ನವೀರಯ್ಯ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here