ಗ್ರಹಣ ವಿಜ್ಞಾನದ ಕೌತುರವಷ್ಟೇ ಅದಕ್ಕೆ ಮೌಢ್ಯದ ಲೇಪನ ಬೇಡ: ದಿನೇಶ ದೊಡ್ಡಮನಿ

0
74

ಕಲಬುರಗಿ: ಜೂನ್ ೨೧ ರಂದು ಬೆಳ್ಳಿಗೆ ೧೦ ಗಂಟೆಗೆ ಸಂಭವಿಸಲಿರುವ ಸೂರ್ಯ ಗ್ರಹಣ ಎಂಬುವುದು ಒಂದು ವಿಜ್ಞಾನದ ಕೌತುರವಷ್ಟೇ, ಅದಕ್ಕೆ ಮೌಢ್ಯದ ಲೇಪನ ನೀಡುವುದು ಸರಿಯಲ್ಲ ಎಂಬುವ ನಿಟ್ಟಿನಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆಯ ವಿಭಾಗಿಯ ಸಂಚಾಲಕರಾದ ದಿನೇಶ.ಎನ್.ದೊಡ್ಡಮನಿ ಅವರ ನೇತೃತ್ವದಲ್ಲಿ ಗೃಹಣ ವೀಕ್ಷಿಸಿ ಸಂಭವಿಸೋಣ ಎಂಬ ಕಾರ್ಯಕ್ರಮವು ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಅವರು ರಾಜ್ಯದಾದ್ಯಂತ ಕರೆಕೊಟ್ಟ ಹಿನ್ನಲೆಯಲ್ಲಿ ನಗರದ ಹೊರವಲಯದ ಕೋಟನೂರ (ಡಿ)ಯ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ವೈಜ್ಞಾನಿಕವಾದ ಕಾರ್ಯಕ್ರಮವನ್ನು ನಡೆಯಿತು.

ಈ ಗೃಹಣದ ವಿಷ್ಮಯಗಳ ಹಿಂಂದಿನ ಸತ್ಯವನ್ನು ಇಂದಿನ ಯುವ ಸಮೂಹವು ಪ್ರಶ್ನಿಸುವ ಮೂಲಕ ಉತ್ತ ಕಂಡುಕೊಳ್ಳವ ಪ್ರಯತ್ನ ಮಾಡಬೇಕಾಗಿದೆ ಎಂದು ದಿನೇಶ ದೊಡ್ಡಮನಿ ಅವರು ಹೇಳಿದರು.
ಸೂರ್ಯ ಗ್ರಹಣ ಸಮಯದಲ್ಲಿ ವೇದಿಕೆಯ ಪದಾಧಿಕಾರಿಗಳು ಹಾಗೂ ವಿಚಾರವಂತರು ಸಮೂಹಿಕವಾಗಿ ಭೋಜನವನ್ನು ಸ್ವೀಕರಿಸಿದರು.

Contact Your\'s Advertisement; 9902492681

ಕೆಲವರನ್ನು ಗೃಹಣದ ಸಂದರ್ಭಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಲಾಭಕ್ಕಾಗಿ ಜನಸಾಮಾನ್ಯರ ಮೇಲೆ ಮೌಢ್ಯದ ಭಯವನ್ನು ತುಂಬಿ ಸಹಸ್ರ ವರ್ಷಗಳಿಂದ ಶೋಷಣೆ ಮಾಡುತ್ತಾ ಬಂದಿರುವುದು ಈ ದೇಶದ ದುರಂತವಾಗಿದೆ ಎಂದರು.

ಇಂದಿನ ವೈಜ್ಞಾನಿಕ ಯುಗದಲ್ಲಿ ಮೌಢ್ಯವನ್ನು ವಿಜ್ಞಾನದ ಮೇಲೆ ಹೊಡೆದು ನಿಲ್ಲುವಂತೆಯಾಗಲು ಕಾರಣವಾಗಿದ್ದು ಜನರಲ್ಲಿ ಇಲ್ಲದೇ ಇರುವ ಶಿಕ್ಷಣ, ಜಾಗೃತಿಯಿಂದ ವಂಚಿತವಾಗಿರುವುದರಿಂದ ಈ ಕಾರಣಕ್ಕಾಗಿ ಎಷ್ಟೋ ಮುಗ್ಧ ಜನರಲ್ಲಿ ಭಯವನ್ನು ತುಂಬಿ ಕತ್ತಲೆಯತ್ತ ಕೊಂಡ್ಯೋಯುತ್ತಿದೆ .ಇಂತಹ ಮೌಢ್ಯದ ಆಚರಣೆಯ ಹಿಂದಿನ ಸತ್ಯವನ್ನು ಮತ್ತು ವಿಜ್ಞಾನದ ಅರಿವನ್ನು ತರುವಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆಯು ನಿರಂತರವಾಗಿ ರಾಜ್ಯಾದ್ಯಾಂತ ಹತ್ತು ಹಲವು ನಿರಂತರವಾದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮತ್ತು ಮುಂದೆಯು ಮಾಡಲಿದೆ ಎಂದು ವೇದಿಕೆಯ ಸಂಚಾಲಕ ದಿನೇಶ ಎನ್.ದೊಡ್ಡಮನಿ ಅವರು ಅಭಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ ಪಾಟೀಲ್, ಬಸವರಾಜ ಹೂಗಾರ, ಮಹಾದೇವ ಪಾಟೀಲ್, ಧರ್ಮಣ್ಣಾ ಗುಲಿಮನಿ, ನಾಗರಾಜ ಬೆಡಜೂರಗಿ, ಸಂಗಮೇಶ ಸಿರಸಗಿ, ಕಿರಣಕುಮಾರ ಪಾಟೀಲ್, ಭೀಮಾಶಂಕರ ಸಿಂಧೆ, ನಾಗರ್ಜುನ್ ಹೊಸಮನಿ, ಗೌತಮ ಹುಲಿಮನಿ, ನಾಗರಾಜ ಎಂಟಮನ್, ಮಲ್ಲಿಕಾರ್ಜುನ ಬೆನಕನಳ್ಳಿ ,ವಿಲಾಸ ಕುಂಬಾರ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here