ಕಲಬುರಗಿ: ಹೈ. ಕ. ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ಹಾಗೂ ಪದವಿಪೂರ್ವ ಮಹಾವಿದ್ಯಾಲಯ ಕ್ಕೆ 2019-2020 ನೇ ಸಾಲಿನ ಪ್ರವೇಶಕ್ಕಾಗಿ ಕಲಬುರಗಿ ತಾಲ್ಲೂಕಿನ ವಿವಿಧ ಶಾಲಾ ಕಾಲೇಜಿಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಮನವಿ ಮಾಡಿದ್ದರು.
ಅವರು ಚಿಂಚೋಳಿ ಪಟ್ಟಣ, ಐನೂಲಿ, ಕೊಳ್ಳೂರು ತುಮಕುಂಟಾ, ಹಸರಗುಂಡಗಿ, ಚಿಮ್ಮನಚೂಡ ಮತ್ತು ಕನಕಪುರ ಸರಕಾರಿ ಹಾಗೂ ಖಾಸಗಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯಗಳ ಅಲ್ಲಿನ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಭೆಟ್ಟಿ ಮಾಡಿ ನಮ್ಮ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಮತ್ತು ನಮ್ಮ ಮಹಾವಿದ್ಯಾಲಯ ಶಿಕ್ಷಣ ಕ್ಷೇತ್ರದಲ್ಲಿ ಗೈದ ಸಾಧನೆ ಹಾಗೂ ಸೌಲಭ್ಯಗಳ ಕುರಿತು ವಿವರಿಸಿದ್ದರು.
ಸಂಸ್ಥೆಯಲ್ಲಿ ಪ್ರತಿಭಾವಂತ ಪ್ರಾಧ್ಯಾಪಕರು ಸಿಬ್ಬಂದಿ, ಸುಸಜ್ಜಿತ ಗ್ರಂಥಾಲಯ ಪ್ರಯೋಗಾಲಯ, ಸ್ಮಾರ್ಟಬೋಡ್, ವಿಶೇಷ ತರಬೇತಿ ಸೌಲಭ್ಯ, ವಿವಿಧ ಶಿಷ್ಯ ವೇತನ ಸೌಲಭ್ಯ, ನಿರಂತರ ಪಾಠಬೋಧನೆ ಮೊದಲಾದ ಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಅಧಿಕಾರಿಗಳು ಜೊತೆಗೊಡಿ ಅಭಿಯಾನ ನಡೆಸಿದ್ದರು.