ಕಲಬುರಗಿ: ಇತ್ತೀಚೆಗೆ ಡಾ.ಸಂಪತಕುಮಾರ ಲೋಯಾ ಅವರನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಸುಭಾಷ ನಾಯಕ್ ಹಾಗೂ ಬಿಜೆಪಿ ಯುವ ಮುಖಂಡ ಸಚಿನ್ ಪಾಟೀಲ್ ಕೊಡಲಹಂಗರಗಿ ಖಂಡಿಸಿದ್ದಾರೆ.
ಡಾ.ಸಂಪತಕುಮಾರ ಲೋಯಾ ಅವರು ೨೦೧೮ರ ವಿಧಾನ ಸಭಾ ಹಾಗೂ ೨೦೧೯ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಲು ಸೂಚಿಸುತ್ತಿರುತ್ತಾರೆ. ಬಿಜೆಪಿ ಪಕ್ಷದಲ್ಲಿ ಅನೇಕ ವರ್ಷಗಳಿಂದ ಹಿರಿಯರನ್ನು ಹಾಗೂ ಇದ್ದಂತ ಕಾರ್ಯಕರ್ತರನ್ನು ಕಡೆಗಣಿಸಿ ಕಾಂಗ್ರೆಸ್ ಪರವಾಗಿ ಇದ್ದಂತ ವ್ಯಕ್ತಿಯನ್ನು ನೇಮಕ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಇದನ್ನು ನಾವು ವಿರೋಧಿಸುತ್ತಿರುತ್ತೇವೆ.
ಬಿಜೆಪಿ ರಾಜ್ಯಾಧ್ಯಕ್ಷರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಹಾಗೂ ನರಾಧ್ಯಕ್ಷರು ಕೂಡಲೇ ಸದಸ್ಯತ್ವನ್ನು ರದ್ದುಗೊಳಿಸಿ, ನಿಷ್ಠಾವಂತ ಕಾರ್ಯಕರ್ತನನ್ನು ನೇಮ ಮಾಡಬೇಕು ಎಂದು ಒತ್ತಾಯಿಸಲಾಗಿದೆ.