ಕಲಬುರಗಿ: 2006 ರಲ್ಲಿ ಎನ್.ವಿ. ಕಾಲೇಜಿನ ಪದವಿ ವಿದ್ಯಾರ್ಥಿಗಳು ನಾವು ಕಾವ್ಯದ ಹೊಸ ಓದು ಎಂಬ ಎರಡು ದಿನದ ಕಾರ್ಯಕ್ರಮ ಇತ್ತು. ಆಗ ಫೋಟೋ ತೆಗೆಸಿಕೊಳ್ಳಬೇಕು ಎಂದರೆ ಸಾಹಿತಿ, ಲೇಖಕಿ, ನಾಡೋಜ ಡಾ. ಗೀತಾ ನಾಗಭೂಷಣ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ವಿದ್ಯಾರ್ಥಿಗಳ ಗುಂಪು ಗುಂಪಾಗಿ ನಿಲ್ಲುತ್ತಿತ್ತು.
ನಮ್ಮ ನೆಲ, ನಮ್ಮ ಹೆಮ್ಮೆ, ನಮ್ಮ ಕಲ್ಯಾಣ ಕರ್ನಾಟಕ ಭಾಗದ ಮಹಿಳಾ ಹಿರಿಯ ಕವಿತ್ರಿ, ಲೇಖಕಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು, ಗದಗ ಜಿಲ್ಲೆಯಲ್ಲಿ ೨೦೧೦ರಲ್ಲಿ ನಡೆದ ೭೬ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶ್ರೀಮತಿ ಗೀತಾ ನಾಗಭೂಷಣನವರು ಆಗಿದ್ದರು, ಅವರು ಕಲಬುರಗಿ ನಗರದಲ್ಲಿ ವಾಸವಾಗಿದ್ದರು… ಅವರ ಪ್ರಸಿದ್ಧವಾದ ಕೃತಿ ಎಂದರೆ “ಬದುಕು ” ಎಂಬ ಪುಸ್ತಕ ಅತ್ಯಂತ ಜನಪ್ರಿಯತೆ ಪಡೆದಿತ್ತು.
-ಬಿ.ಎಂ. ಪಾಟೀಲ, ಕಲ್ಲೂರ