ಅತಿಥಿ ಶಿಕ್ಷಕರಿಗೆ ರಜೆ ವೇತನ ಕೊಟ್ಟು ಗೌರವ ಕೊಡಿ

0
88

ವಾಡಿ: ಕೊರೊನಾ ಹೊಡೆತದಿಂದ ತತ್ತರಿಸಿರುವ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರಿಗೆ ಗೌರವ ವೇತನ ಕೈಗಿಟ್ಟು ರಜೆ ದಿನಗಳ ಸಂಕಷ್ಟಗಳನ್ನು ಮರೆತಿರುವ ಸರಕಾರ ಅಗೌರವದಿಂದ ನಡೆದುಕೊಂಡಿದೆ ಎಂದು ಆರೋಪಿಸಿ ರಾಜ್ಯದ ಅತಿಥಿ ಶಿಕ್ಷಕ ಸಮುದಾಯ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಶುಕ್ರವಾರ ಕರೆ ಕೊಟ್ಟ ಆನ್‌ಲೈನ್ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಅತಿಥಿ ಉಪನ್ಯಾಸಕರು-ಶಿಕ್ಷಕರು, ತಮ್ಮ ಮನೆಯಂಗಳದಲ್ಲಿ ನಿಂತು ಬೇಡಿಕೆಗಳ ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಸರಕಾರ ಅತ್ಯಂತ ಕಡಿಮೆ ವೇತನವನ್ನು ಕೊಟ್ಟು ನಮ್ಮನ್ನು ದುಡಿಸಿಕೊಳ್ಳುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೋಧನೆಯಿಲ್ಲದೆ ಮನೆಯಲ್ಲಿ ಉಳಿದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ.

Contact Your\'s Advertisement; 9902492681

ರಜೆ ತಿಂಗಳ ವೇತನ ಇಲ್ಲವಾದ್ದರಿಂದ ಬದುಕು ತೂಗಿಸುವುದು ಕಷ್ಟದ ಕೆಲಸವಾಗಿದೆ. ಸರಕಾರ ಕೋವಿಡ್-೧೯ ಪ್ಯಾಕೇಜ್ ಘೋಷಿಸದೆ ಅನ್ಯಾಯ ಮಾಡಿದೆ ಎಂದು ದೂರಿದ ವಾಡಿ, ರಾವೂರ, ನಾಲವಾರ ವಲಯದ ಅತಿಥಿ ಶಿಕ್ಷಕರು, ಸಮಾನ ದುಡಿಮೆಗೆ ಸಮಾನ ವೇತನ ಮಂಜೂರು ಮಾಡಬೇಕು. ಕೋವಿಡ್ ಸಂಕಷ್ಟ ಪರಿಹಾರ ಘೋಷಿಸಬೇಕು. ರಜೆ ತಿಂಗಳ ವೇತನ ಮಂಜೂರು ಮಾಡಬೇಕು. ಗೌರವ ಧನ ಹೆಚ್ಚಿಸಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here