ದೇವತ್ಕಲ್ ಬಳಿ ರಸ್ತೆ ಅಪಘಾತ ಒಬ್ಬ ಮೃತ ಮೂವರಿಗೆ ಗಾಯ

0
172

ಸುರಪುರ: ತಾಲೂಕಿನ ದೇವತ್ಕಲ್ ಬಳಿಯಲ್ಲಿನ ದೇವಾಪುರ ಮನಗೂಳಿ ರಾಜ್ಯ ಹೆದ್ದಾರಿಯಲ್ಲಿ ಮದ್ಹ್ಯಾನ ಕಾರು ಮತ್ತು ಟ್ರ್ಯಾಕ್ಟರ್ ಮದ್ಯೆ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೆ ಮೃತಪಟ್ಟು ಇನ್ನುಳಿದ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ಕಾರು ದೇವಾಪುರ ಕಡೆಯಿಂದ ಹೋಗುತ್ತಿದ್ದು ಪಕ್ಕದ ತಿರುವಿನಲ್ಲಿ ಬಂದ್ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಕಾರು ಪಲ್ಟಿಯಾಗಿದೆ.ಇದಿರಿಂದ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತನಾಗಿದ್ದಾನೆ.ಕಾರಿನಲ್ಲಿ ಒಟ್ಟ ಮೂರು ಜನ ಪ್ರಯಾಣಿಸುತ್ತಿದ್ದು ಇನ್ನುಳಿದ ಇಬ್ಬರಿಗೆ ಮತ್ತು ಟ್ರ್ಯಾಕ್ಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು.ಮೂವರನ್ನು ಸುರಪುರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

Contact Your\'s Advertisement; 9902492681

ಮೃತ ವ್ಯಕ್ತಿ ಸುಶೀಲ ಚವ್ಹಾಣ (19 ವರ್ಷ) ಹಾಗು ಗಾಯಾಳುಗಳಾದ ಪ್ರಕಾಶ ಚಂದರ್ ರಾಠೋಡ (28 ವರ್ಷ) ಸಂತೋಷ ಚವ್ಹಾಣ (24) ಇದ್ದು ಮೂವರು ಸೈದಾಪುರ ಗ್ರಾಮದವರಾಗಿದ್ದಾರೆ.ಹಾಗು ಟ್ರ್ಯಾಕ್ಟರ್ ಚಾಲಕ ಶರಣಗೌಡ ಮಾಲಿಪಾಟೀಲ (45) ಗೋಡಿಹಾಳ ಗ್ರಾಮದವರಾಗಿದ್ದಾರೆ.

ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here