ತ್ರಿಮೂರ್ತಿಗಳ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ: ರಾಜಾ ಮದನಗೋಪಾಲ ನಾಯಕ

0
197

ಸುರಪುರ: ಕನ್ನಡ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿರುವ ಖ್ಯಾತ ಸಾಹಿತಿಗಳಾದ ಎ.ಕೃಷ್ಣಾ ಅರಳಿಗಿಡ,ಗೀತಾ ನಾಗಭೂಷಣ ಹಾಗು ಬಸವರಾಜ ರುಮಾಲ ಅವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ ಎಂದು ಮಾಜಿ ಸಚಿವ ಹಾಗು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಾಜಾ ಮದನಗೋಪಾಲ ನಾಯಕ ನುಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗು ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿಗಳಾದ ಗೀತಾ ನಾಗಭೂಷಣ,ಎ.ಕೃಷ್ಣಾ ಸುರಪುರ ಹಾಗು ಬಸವರಾಜ ರುಮಾಲ ಅವರಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಗೀತಾ ನಾಗಭೂಷಣ ಅವರು ಮೊಘಲಾಯಿ ಭಾಷೆಯ ದಿಟ್ಟ ಬರಹಗಾರ್ತಿಯಾಗಿದ್ದರು.ಎ.ಕೃಷ್ಣಾ ಸುರಪುರ ಅವರು ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ,ಬಸವರಾಜ ರುಮಾಲ ಅವರು ಸದಾಕಾಲ ನಮ್ಮ ಎಲ್ಲಾ ಸಾಹಿತ್ಯದ ಕಾರ್ಯಕ್ರಮಗಳಿಗೆ ಹಾಜರಿದ್ದು ಮಾರ್ಗದರ್ಶನ ಮಾಡುತ್ತಿದ್ದರು.ಎ.ಕೃಷ್ಣಾ ಅವರ ಹೆಸರಲ್ಲಿ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡುವತ್ತ ಚಿಂತನೆ ನಡೆಸೋಣ ಎಂದರು.

Contact Your\'s Advertisement; 9902492681

ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಎ.ಕೃಷ್ಣಾ ಮತ್ತು ಬಸವರಾಜ ರುಮಾಲ ಅವರ ನಿಧನ ಗಿದ್ಭ್ರಮೆ ಉಂಟುಮಾಡಿದೆ.ಮುಂದೆ ನಮಗೆ ಮಾರ್ಗದರ್ಶನ ಮಾಡುವವರು ಯಾರೆಂದು ಯೋಚನೆಯಾಗಿದೆ.ಎ.ಕೃಷ್ಣಾ ಅವರು ರವೀಂದ್ರನಾಥ ಠಾಗೋರರ ಗೀತಾಂಜಲಿ ಕನ್ನಡಕ್ಕೆ ಅನುವಾದ ಮಾಡಿದ ಸಾಹಿತ್ಯದ ರತ್ನವಾಗಿದ್ದಾರೆ ಅವರ ಅಗಲಿಕೆ ತುಂಬಾ ನೋವು ಮೂಡಿಸಿದೆ ಎಂದು ಭಾವುಕರಾದರು.

ಸಭೆಯ ಆರಂಭದಲ್ಲಿ ಅಗಲಿದ ಮೂವರು ಸಾಹಿತಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ನಂತರ ವಕೀಲ ನಿಂಗಣ್ಣ ಚಿಂಚೋಡಿ,ಜಯಲಲಿತ ಪಾಟೀಲ,ಬಸವರಾಜ ಜಮದ್ರಖಾನಿ,ಇಕ್ಬಾಲ್ ರಾಹಿ ತಿಮ್ಮಾಪುರ,ಅರ್ಷದ ದಖನಿ,ಪಂಡೀತ ನಿಂಬೂರ ಮಾತನಾಡಿದರು.ಸಾಹಿತಿಗಳಾದ ಹೆಚ್.ರಾಠೋಡ,ಬೀರಣ್ಣ ಆಲ್ದಾಳ ಹಾಗು ನಬಿಲಾಲ ಮಕಾಂದಾರ ಅವರು ಎ.ಕೃಷ್ಣಾರ ಕುರಿತು ಸ್ವರಚಿತ ಕವನಗಳನ್ನು ವಾಚಿಸಿದರು.

ಸಭೆಯಲ್ಲಿ ವಕೀಲ ಬಸವಲಿಂಗಪ್ಪ ಪಾಟೀಲ,ಸೋಮರಡ್ಡಿ ಮಂಗಿಹಾಳ,ಮಲ್ಲೇಶ ಪಾಟೀಲ,ಯಲ್ಲಪ್ಪ ಹುಲಕಲ್,ಪ್ರಕಾಶ ಅಲಬನೂರ,ಮಲ್ಲಿಕಾರ್ಜುನ ಸತ್ಯಂಪೇಟೆ,ರಾಘವೇಂದ್ರ ಭಕ್ರಿ,ವೆಂಕಟೇಶಗೌಡ,ಶರಣಬಸಪ್ಪ ಯಳವಾರ ಇದ್ದರು.ದೇವು ಹೆಬ್ಬಾಳ ನಿರೂಪಿಸಿದರು,ರಾಜಶೇಖರ ದೇಸಾಯಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here