ವಿದ್ಯುತ್ ತಗುಲಿ ಬಾಲಕ ಮತ್ತು ಆಕಳ ಸಾವು

0
55

ವಿದ್ಯುತ್ ತಗುಲಿ ಬಾಲಕ ಮತ್ತು ಆಕಳ ಸಾವು

ಶಹಾಬಾದ:ತಾಲೂಕಿನ ವ್ಯಾಪ್ತಿಯ ಶಂಕರವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 150 ರ ಪಕ್ಕದಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ಆಕಳಿಗೆ ತಗುಲಿ ಆಕಳು ಮೃತ ಪಟ್ಟಿದ್ದು, ಆಕಳನ್ನು ಉಳಿಸಲು ಹೋದ ದನಗಾಯಿ ಬಾಲಕನು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆಕಳುಗಳನ್ನು ಮೇಯಿಸಲು ಹೊರಟಿದ್ದ ಶಂಕರವಾಡಿ ಗ್ರಾಮದ ಬಿರಣ್ಣಾ ಭೀಮಾಶಂಕರ (15) ಹೆದ್ದಾರಿ ಪಕ್ಕದ ರಘೋಜಿ ಕಾರ್ಖಾನೆ ಕಂಪೌಂಡ ಗೋಡೆಯ ಬಳಿ ಮುಳ್ಳು ಕಂಟಿಗಳ ನಡುವೆ ಹೋದ ಆಕಳು, ಕಾಖರ್ಾನೆಗೆ ವಿದ್ಯುತ್ ಸರಬರಾಜು ಮಾಡುವ ಹೈಟೆನಕ್ಷನ್ ವಿದ್ಯುತ್ ತಂತಿ ಕಡಿದು ಬಿದ್ದಿದ್ದರಿಂದ ವಿದ್ಯುತ್ ತಗುಲಿ ಒದ್ದಾಡುತ್ತಿರುವದನ್ನು ಕಂಡ ಬಿರಣ್ಣಾ ಕೂಡಲೇ ಆಕಳನ್ನು ಉಳಿಸಿಕೊಳ್ಳಲು ಹೋಗಿ, ಆತನಿಗೂ ವಿದ್ಯುತ್ ತಗುಲಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ವಿಷಯ ತಿಳಿದ ಡಿವೈಎಸ್ಪಿ ವೆಂಕಣ್ಣಗೌಡ ಪಾಟೀಲ, ಪಿಐ ಬಿ.ಅಮರೇಶ, ಜೆಸ್ಕಾಂ ಎಇಇ ಸೈಯದ್ ಅನ್ವರ, ಸೆಕ್ಷನ್ ಅಧಿಕಾರಿ ಸಿದ್ದಪ್ಪ ಹಂಚನಾಳ, ಜೆಸ್ಕಾಂ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ದೇವರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಸರಬರಾಜು ಕಡಿತಗೊಳಿಸಿ ಮೃತ ಬಾಲಕನನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಸಕರ್ಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಕರಣವನ್ನು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Contact Your\'s Advertisement; 9902492681

ಪರಿಹಾರಕ್ಕೆ ಒತ್ತಾಯ: ಶಂಕರವಾಡಿ ಗ್ರಾಮದ ಬಾಲಕ ಭೀರಣ್ಣ ಕಡಿದು ಬಿದ್ದ ವಿದ್ಯುತ್ ತಂತಿಗೆ ಆಕಳು ದೇಹ ತಗುಲಿ ಒದ್ದಾಡುತ್ತಿರುವುದನ್ನು ಗಮನಿಸಿ, ಉಳಿಸಲು ಹೋಗಿ ತಾನಿ ವಿದ್ಯುತ್ ತಂತಿಗೆ ಬಲಿಯಾಗಿದ್ದಾನೆ.ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಬಾಲಕ ಹಾಗೂ ಆಕಳ ಸಾವು ಸಂಭವಿಸಿದ್ದು, ಮೃತ ಬಾಲಕನ ಮನೆಯವರಿಗೆ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಮುಖಂಡ ರಾಜೇಶ ಯನಗುಂಟಿಕರ್, ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here