ಶಹಾಬಾದ:ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತಿಗೂ ನಿಷ್ಪ್ರಯೋಜಕವಾಗುದಿಲ್ಲ. ಒಂದಿಲ್ಲೊಂದು ದಿನ ಫಲ ನೀಡುತ್ತದೆ ಎಂಬುದಕ್ಕೆ ಈ ಮಕ್ಕಳ ಸಾಧನೆಯೇ ಹೇಳುತ್ತದೆ ಎಂದು ಚಿತ್ತಾಪೂರ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ್ ಸೇಡಂ ಹೇಳಿದರು.
ಅವರು ಬುಧವಾರ ರಾವೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗೆಳೆಯರ ಬಳಗದ ವತಿಯಿಂದ ಗ್ರಾಮದ ಪಿಯುಸಿ ಹಾಗೂ ಹತ್ತನೇ (ಸಿಬಿಎಸ್ಸಿ) ತರಗತಿಯಲ್ಲಿ ಶೇ. 85ಕ್ಕಿಂತ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ. ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು.ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.
ಗೆಳೆಯರ ಬಳಗದ ಅಧ್ಯಕ್ಷ ಸಿದ್ಧಲಿಂಗ ಬಾಳಿ ಮಾತನಾಡಿ, ಹಿಂದುಳಿದ ಕಲ್ಲಿನ ಗಣಿಗಾರಿಕೆಯ ಪ್ರದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಎಲ್ಲರನ್ನು ಹುಬ್ಬರಿಸವಂತೆ ಸಾಧನೆ ಮಾಡಿರುವದು ಶ್ಲಾಘನೀಯ. ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ , ಕಲಿಸಿದವರ ಹೆಸರನ್ನು ತರುವಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಸನ್ಮಾನಿತ ಮಕ್ಕಳಾದ ಪಿಯುಸಿ ಮಕ್ಕಳಾದ ಸರಸ್ವತಿ ಜಾನಪ್ಪ, ಅಶ್ವಿನಿ ಯಲ್ಲಪ್ಪ, ಪೂರ್ಣಿಮಾ ಸದಾಶಿವ, ಸಲೀಮಾಬೇಗಂ ಬಾಬುಮೀಯಾ, ಅಭಿಷೇಕ ಗುಣಶೇಖರ ಹಾಗೂ ಹತ್ತನೇ (ಸಿಬಿಎಸ್ಸಿ) ವಿದ್ಯಾರ್ಥಿಗಳಾದ ಬಸವರಾಜ ಅಣವೀರಪ್ಪ, ಶಶಾಂಕ ಯಶವಂತ ಸನ್ಮಾನಿಸಲಾಯಿತು.
ಯುವ ಸಾಹಿತಿ ಡಾ.ಮಲ್ಲಿನಾಥ ತಳವಾರ, ರೇವಣಸಿದ್ದಯ್ಯ ವಲಂಡಿ, ಯುನೂಸ್ ಪ್ಯಾರೇ, ಮಹೇಶ ಬಾಳಿ, ವಿಜಯಕುಮಾರ ಗುದಗಲ್,ಭೀಮರಾಯ ಮದಗುಣಕಿ,ಶಾಂತು ಬಾಳಿ,ಅವಿನಾಶ ಅರಳಿ,ನಾಗೇಶ ಸಜ್ಜನ್,ವಿಶ್ವ ಭೈರಾಮಡಗಿ, ವಿರೇಶ ಕಲ್ಲೂರಕರ್,ನಾಗಪ್ಪ ತುಮಕೂರ,ಶಿವಕುಮಾರ ನಡುವಿನಕೇರಿ,ಈರಣ್ಣ ಪಂಚಾಳ,ಈರಣ್ಣ ಹಳ್ಳಿ,ವೆಂಕಟೇಶ ಬೊಮ್ಮನ್,ಸಂಗಮೇಶ ಬಾಳಿ,ಸಿದ್ದು ಪಾಟೀಲ, ವಿರೇಶ ಬಾಳಿ ಇತರರು ಇದ್ದರು.