ಕಲಬುರಗಿ: ಹಿರಿಯ ಲೇಖಕರು, ಎ. ಕ್ರಷ್ಣ ಸುರಪುರ ಅವರು ರಚಿಸಿದ ” ಹರಕು ಚಾಪೆಯ ಮನೆಗೆ ಸಿರಿದೈವ ಬಂತು ” ಕವನ ಸಂಕಲನ ಕುರಿತು ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಚರ್ಚಾ ಗೋಷ್ಠಿ ನಡೆಯಿತು.
ವಿಮರ್ಶಕರು ಸರಕಾರಿ ಪದವಿ ಮಹಾವಿದ್ಯಾಲಯ ದ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರು ಡಾ ಸುರೇಂದ್ರಕುಮಾರ ಕೆರಮಗಿ ಅವರು ವಿಮರ್ಶೆ ಮಾಡಿದರು. ಕನ್ನಡ ಕಾವ್ಯ ಪರಂಪರೆಯಲ್ಲಿ ಹೈದರಾಬಾದ್ ಕರ್ನಾಟಕದ ಕೊಡುಗೆ ಮೆಲುಕು ಹಾಕುತ್ತಾ ಹಿರಿಯ ತಲೆಮಾರಿನ ಕವಿಗಳ ಪ್ರಕ್ರತಿ ಪ್ರೇಮ, ನಾಡ ನುಡಿ ಅಭಿಮಾನ ಭಾವ ಭಾಷೆಯ, ಎರಕ ಕಾವ್ಯ ತಂತ್ರ ಸಂವೇದನೆ ಅಭಿವ್ಯಕ್ತಿ ಕ್ರಮ ವನ್ನು ಎ ಕ್ರಷ್ಣ ಸುರಪುರ ಅವರ ಕಾವ್ಯ ವನ್ನು ವಿಶ್ಲೇಷಿದರು.ಸುರಪುರವರ ಕಾವ್ಯ ವಿವೇಕ ಗಮನಾರ್ಹ ಎಂದರು.
ಹಿರಿಯ ಕವಿ ಕಾದಂಬರಿಕಾರ ವಿಶ್ರಾಂತ ಪ್ರಾಚಾರ್ಯರು ಡಾ ಸ್ವಾಮಿರಾವ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ನಾಡು ಲೇಖಕರು ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಅಪ್ಪಾರಾವ್ ಅಕ್ಕೋಣಿ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಸಂಘದ ಉದ್ದೇಶ ಕ್ರತಿ ,ಲೇಖಕರು ಓದುಗರ ನಡುವೆ ಸಾಹಿತ್ಯ ಆಸಕ್ತಿ ಮೂಡಿಸಿ ಮೂಡಿಸುವುದರ ಜೊತೆಗೆ ವಿಮರ್ಶೆ ಗೆ ವೇದಿಕೆ ನಿರ್ಮಿಸುವುದು ಆಗಿದೆ ಎಂದರು ಕಾರ್ಯದರ್ಶಿ ಡಾ ಶರಣಬಸಪ್ಪ ವಡ್ಡನಕೇರಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾವ್ಯ ಚರ್ಚೆಯಲ್ಲಿ ಸಾಹಿತಿ ಸುಬ್ರಾವ ಕುಲಕರ್ಣಿ ಡಾ ಸೂರ್ಯಕಾಂತ ಸುಜ್ಯಾತ್, ಪ್ರೊ ಎಸ್ ಎಲ್ ಪಾಟೀಲ, ಪರಿಸರವಾದಿ ಶ್ರೀ ಪಿ. ಮನು ಸಗರಶ್ರೀ ವೆಂಕಟೇಶ್ ಜನಾದ್ರಿ, ಶ್ರೀ ಶಿವಾನಂದ ಭೂಪತಿ, ಶ್ರೀ ಶಿವಾನಂದ ಕಟ್ಟಿ, ಶ್ರೀ ನಾಗರಾಜ್ ಜಮದ್ರಖಾನಿ, ಶ್ರೀ ನರಸಿಂಗರಾವ ಹೇಮನೂರ, ಡಾ ಶ್ರೀಶೈಲ ನಾಗರಾಳ ಕಲಬುರಗಿ ಮುಂತಾದವರು ಪಾಲ್ಗೊಂಡಿದ್ದರು.