ಕಲಬುರಗಿ: ದಕ್ಷಿಣ ಮತ ಕ್ಷೇತ್ರದ ಯುವ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದಕ್ಕೆ ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಶಾಸಕರ ನಿರಂತರ ಶ್ರಮಕ್ಕೆ ಪ್ರಯತ್ನ ಒಲಿದು ಬಂದ ಅವಕಾಶವಾಗಿದೆ, ಈ ಭಾಗ ಹೆಚ್ಚಿನ ಅಭಿವೃದ್ದಿಯಾಗಲಿ ತಮ್ಮ ದಾರಿ ಯಶಸ್ವಿಯಾಗಲಿ ಹಾರೈಸಿದ್ದಾರೆ.
ಶಾಸಕರಾದ ರಾಜಕುಮಾರ್ ಪಾಟೀಲ್ ತೇಲಕೂರವರು ಈಶಾನ್ಯ ಕರ್ಣಾಟಕ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಅಭಿನಂದನೆ ವ್ಯಕ್ತಪಡಿಸಿದ್ದಾರೆ.