ನನ್ನ ರಾಜಕೀಯ ಕ್ಷೇತ್ರದ ಗುರು ನನ್ನ ತಂದೆ ಧರ್ಮಸಿಂಗ್: ಡಾ. ಅಜಯಸಿಂಗ್

0
108
ಜೇವರ್ಗಿ (ನೆಲೋಗಿ): ದಿ. ಎನ್. ಧರ್ಮಸಿಂಗ್ ಅವರು ಒಬ್ಬ ತಂದೆಯಾಗಿ ನನ್ನ ರಾಜಕೀಯ ಜೀವನದ ಗುರುವಾಗಿ ಬದುಕು ನೀಡಿ, ತಮ್ಮದೇ ದಾರಿಯಲ್ಲಿ ನಡೆಯಲು ಸ್ಪೂರ್ತಿ ನೀಡಿದ, ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾಗಿ ಎಲ್ಲಾ  ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅಪರೂಪದ ರಾಜಕಾರಣಿ ಎಂದು ಶಾಸಕ ಡಾ. ಅಜಯಸಿಂಗ್ ಅಭಿಪ್ರಾಯಪಟ್ಟರು.
ದಿವಂಗತ ಧರ್ಮ ಸಿಂಗ್ ಅವರ ತೃತೀಯ ಪುಣ್ಯಸ್ಮರಣೆ ನಿಮಿತ್ತ ಸೋಮವಾರ ಸ್ವಗ್ರಾಮ ನೆಲೋಗಿ ಹಾಗೂ ಕಲಬುರಗಿಯ ನಿವಾಸದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ತಮ್ಮ ತಂದೆಯವರ ಪುತ್ಥಳಿ ಮತ್ತು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಧರ್ಮಸಿಂಗ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ಮಾರ್ಗ ನಮ್ಮ ಕಣ್ಣ ಮುಂದಿದೆ. ಅವರ  ಜನೋಪಯೋಗಿ ಕೆಲಸಗಳು ಇಂದಿಗೂ ಮಾತನಾಡುವಂತಾಗಿದ್ದು, ಕ್ಷೇತ್ರದ ಜನರ ಹಾಗೂ ಪಕ್ಷದ ಕಾರ್ಯಕರ್ತರ ಪ್ರೀತಿ, ಅಭಿಮಾನ ನಮ್ಮ ಕುಟುಂಬದ ಮೇಲಿಟ್ಟಿರುವುದು ತೀರಿಸಲಾಗದ ಋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಧರ್ಮಸಿಂಗ್ ಅವರ ಹಿರಿಯ ಪುತ್ರ ವಿಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡರಾದ ನೀಲಕಂಠರಾವ ಮೂಲಗೆ, ಹಣಮಂತ ಭೂಸನೂರ ಸೇರಿದಂತೆ ಕುಟುಂಬ ಸದಸ್ಯರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here