ಚಿಂಚೋಳಿ: ತಾಲೂಕಿನ ದೋಟಿಕೋಳ ಗ್ರಾಮದಲ್ಲಿಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡಕರ್ ಹಾಗು ತಥಾಗತ ಭಗವಾನ್ ಗೌತಮ್ ಬುದ್ಧರ ಭಾವಚಿತ್ರಕ್ಕೆ ಪೂಜೆ ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಹಮಾರಿ ಕೋರೋನಾ ವೈರಸ್ ಸೊಂಕು ಹರಡುವಿಕೆ ತಡೆಗಟ್ಟುವ ಬಗ್ಗೆ ಜನರಿಗೆ ಅರಿವು ಮೂಡಿಸಿ ಮಾಹಪುರುಷರ ಜೀವನ್ ಸಂದೇಶ್ ಅಭಿಯಾನ ಕಾರ್ಯಕ್ರಮ ಜರುಗಿತು.
ಪ್ರತಿಯೋಬ್ಬರ ಜೀವನದಲ್ಲಿ ಒಂದಿಲ್ಲೊಂದು ಅವಮಾನ, ಕಷ್ಠ, ಸುಖಗಳು ಬರುವುದು ಕಟ್ಟಿಟ್ಟ ಬುತ್ತಿ ಅವುಗಳಿಗೆ ಯಾರು ಹೆದರದೆ, ಬಂದ ಕಷ್ಠಗಳು ಚಾಲೆಂಜಾಗಿ ಸ್ವಿಕಾರ ಮಾಡಿ ಬದುಕುತ್ತಾರೆಯೊ ಅಂಥವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗುತ್ತಾರೆಂದು ಭಾರತ ಮುಕ್ತಿ ಮೊರ್ಚಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿಯವರು ಹೇಳಿದರು.
ಮಾಹಪುರುಷರ ಜೀವನದಲ್ಲಿಯು ಅನೇಕ ಕಷ್ಟ, ಕಾರ್ಪಣ್ಯಗಳು ಬಂದರು ಅವರು ಹೆದರದೆ ಸಾಮಾಜಿಕ ಪರಿವರ್ತನೆಯ ಚಳುವಳಿಯ ಹಾದಿಯಲ್ಲಿ ಮುನ್ನುಡೆದದಕ್ಕಾಗಿ ಇವತ್ತು ಅವರ ವಿಚಾರ ಧಾರೆಗಳು ಸಮಾಜದಲ್ಲಿ ಜೀವಂತವಾಗಿವೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರರಿಗೆ ಕುಡಿಯಲು ನೀರು ಸಿಗಲಿಲ್ಲ ಆದರೆ ಇಂದು ನಮ್ಮ ಅಡುಗೆ ಮನೆಯಲ್ಲಿ ನೀರು ಬರುತ್ತಿವೆ ಅದಕ್ಕೆ ಕಾರಣ ಬಾಬಾಸಾಹೇಬ ಅಂಬೇಡ್ಕರವರು ನಡೆಸಿದ ಸಾಮಾಜಿಕ ಪರಿವರ್ತನೆಯ ಚಳುವಳಿ ಕಾರಣವೆಂದರೆ ತಪ್ಪಾಗಲಾರದು ಅಂತಹ ಮಾಹಪುರುಷರ ವಿಚಾರಧಾರೆಗಳು ನಮ್ಮ ಸಮಾಜ ಮರೆಯೆದೆ ಪ್ರತಿಹಳ್ಳಿ ಹಳ್ಳಿಗು ಪ್ರಚಾರ ಮಾಡುವುದು ಅನಿವಾರ್ಯವಾಗಿದೆ ಎಂದು ಕರೆ ನೀಡಿದರು.
ಭಾರತ ಮುಕ್ತಿ ಮೊರ್ಚಾ ಹಾಗೂ ಭಾರತೀಯ ವಿದ್ಯಾರ್ಥಿ ಮೊರ್ಚಾ ಸಂಘಟನೆ ದೇಶದಾದ್ಯಂತ ವಿಚಾರ ಪರಿವರ್ತನೆ ಕ್ರಾಂತಿ ಮಾಡುತ್ತಾ ಬರುತ್ತಿದೆ ಯುವಕರಿಗೆ ಸಮಾಜಕ್ಕೆ ಮಾಹತ್ಮರ ವಿಚಾರ ತಿಳಿಸದಿದ್ದರೆ ದೇಶಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಎಂದು ಸುದಿರ್ಗವಾಗಿ ಎಂದರು.
ನಂತರ ಬಹುಜನ ಕ್ರಾಂತಿ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿರಾಮ ದೇಗಲ್ಮಡಿ, ಭಾರತ ಮುಕ್ತಿ ಮೊರ್ಚಾ ಸಂಘಟನೆ ತಾಲೂಕಾಧ್ಯಕ್ಷ ಉಮೇಶ ದೋಟಿಕೋಳ, ವೇದಿಕೆಯಲ್ಲಿ ರಾಜಕುಮಾರ್ ಬೇನೂರ್, ಶಾಮರಡ್ಡಿ ಸುಲೇಪೇಟ ಉಪಸ್ಥಿತರಿದ್ದರು.
ಇದೇ ವೇಳೆಯಲ್ಲಿ ರಾಷ್ಟ್ರೀಯ ಮೂಲನಿವಾಸಿ ಮಹಿಳಾ ಸಂಘದ ಅಧ್ಯಕ್ಷರಾಗಿ ಶೋಭಾ, ಉಪಾಧ್ಯಕ್ಷರಾಗಿ ಕಮಲಮ್ಮ, ಕಾರ್ಯಧ್ಯಕ್ಷರಾಗಿ, ಮಸ್ತಾನಬಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಮ್ಮ ಇವರಿಗೆ ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಕಿಸಾನ್ ಮೊರ್ಚಾ
ಅಧ್ಯಕ್ಷರಾಗಿ ಯಲ್ಲಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ನಾಗಪ್ಪ, ಕಾರ್ಯಧ್ಯಕ್ಷರಾಗಿ, ಜಗನ್ನಾಥ, ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ರವರನ್ನು ಆಯ್ಕೆ ಮಾಡಲಾಯಿತು, ಭಾರತ ಮುಕ್ತಿ ಮೊರ್ಚಾ ಅಧ್ಯಕ್ಷರಾಗಿ ರಾಜಕುಮಾರ್ ಬೇನೂರ್, ಉಪಾಧ್ಯಕ್ಷರಾಗಿ ಶಿವಲಿಂಗ್, ಕಾರ್ಯಧ್ಯಕ್ಷರಾಗಿ ಸಾಯಿಬಣ್ಣಾ.ಪ್ರಧಾನ ಕಾರ್ಯದರ್ಶಿ ಗೋಪಾಲ, ಸೂರ್ಯಕಾಂತ, ಗುರುನಾಥ, ಮುಂತಾದವರನ್ನು ಆಯ್ಕೆ ಮಾಡಿ ಸಂಘಟನೆ ಜವಾಬ್ದಾರಿ ವಹಿಸಿ ಕೊಡಲಾಯಿತು.